ಹೈದರಾಬಾದ್: ಬಾಲಿವುಡ್ ನಿರ್ದೇಶಕ ರಾಮ್ಗೋಪಾಲ್ ವರ್ಮ ಜತೆ ಬಿಗ್ಬಾಸ್ ಬ್ಯೂಟಿ ಅರಿಯಾನಾ ಗ್ಲೋರಿ, ದೇಹದ ಅಂಗಾಂಗ, ಸೆಕ್ಸ್, ರೊಮ್ಯಾನ್ಸ್, ಸಂಬಂಧ (ಅಫೇರ್) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಟ್ರೋಲಿಗರಿಗೆ ಆರ್ಜಿವಿ ಮತ್ತು ಅರಿಯಾನಾ ಹಾಟ್ ಸಂದರ್ಶನವು ಆಹಾರವಾಗಿದೆ. ಇದರ ನುಡವೆ ಅರಿಯಾನಾ ಜತೆ ಬಿಗ್ಬಾಸ್ನಲ್ಲಿ ಭಾಗಿಯಾಗಿದ್ದ ಸೈಯದ್ ಸೊಹೆಲ್, ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.
ಅರಿಯಾನಾ ಮತ್ತು ಸೊಹೆಲ್ ತೆಲುಗು ಬಿಗ್ಬಾಸ್ ಸೀಸನ್ 4 ಸ್ಪರ್ಧಿಯಾಗಿದ್ದರು. ಬಿಗ್ಬಾಸ್ನಲ್ಲೂ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಅಲ್ಲದೆ, ಇಬ್ಬರನ್ನು ಒಟ್ಟಿಗೆ ರಹಸ್ಯ ಕೋಣೆಗೆ ಶೋ ವೇಳೆ ಕಳುಹಿಸಲಾಗಿತ್ತು. ಹೀಗಾಗಿ ಇಬ್ಬರ ನಡುವೆ ಸ್ನೇಹವಿದ್ದು, ಅದು ಹಾಗೇ ಮುಂದುವರಿದಿದೆ. ಇಬ್ಬರು ಭೇಟಿಯಾಗುವುದು ಸಹ ಸಾಮಾನ್ಯವಾಗಿದೆ.
ಸೊಹೆಲ್ ಇತ್ತೀಚೆಗೆ ಅರಿಯಾನಾ ಮನೆಗೆ ಹೋಗಿ ಬಂದಿದ್ದಾರೆ. ಈ ವೇಳೆ ಅರಿಯಾನಾ ಫೇವರಿಟ್ ಚಿಂಟು ಗೊಂಬೆ (ಬಿಗ್ಬಾಸ್ ಸ್ಮರಣಾರ್ತ ಅಲ್ಲಿಂದ ತಂದಿರುವ ಗೊಂಬೆ) ತೆಗೆದುಕೊಂಡು ಬಂದಿದ್ದಾರೆ. ಗೊಂಬೆಯ ಜತೆಗೆ ವಿಡಿಯೋವೊಂದನ್ನು ಶೇರ್ ಮಾಡಿರುವ ಸೊಹೆಲ್ ಅದರಲ್ಲಿ, ಮೊದಲನೇ ಬಾರಿ ಒಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆನಿಸಿದೆ. ಅವರು ನನ್ನ ಸಹಜ ಶತ್ರು. ಬಿಗ್ಬಾಸ್ ಜರ್ನಿ ಯಶಸ್ವಿಯಾಗಿತ್ತು. ಈಗಲೂ ನನಗೊಬ್ಬ ಶತ್ರು ಇದ್ದಾರೆ. ಅವರನ್ನು ಇನ್ನು ಮುಂದೆ ಬಿಡುವುದಿಲ್ಲ ಎನ್ನುತ್ತಾ ಅರಿಯಾನ ನಾನು ನಿನ್ನು ಕೊಲ್ಲುತ್ತೇನೆಂದು ತಮಾಷೆ ಮಾಡಿದ್ದಾರೆ.
ಆದರೆ, ನೆಟ್ಟಿಗರು ಸೊಹೆಲ್ ವಿಡಿಯೋವನ್ನು ಆರ್ಜಿವಿ ಸಂದರ್ಶನಕ್ಕೆ ತಳುಕು ಹಾಕಿ ಸೊಹೆಲ್ ಕಾಲು ಎಳೆಯುತ್ತಿದ್ದಾರೆ. ಅರಿಯಾನಾ ಬೋಲ್ಡ್ ಆಗಿ ಮಾತನಾಡಿದ್ದಕ್ಕೆ ಸೊಹೆಲ್ ಹೊಟ್ಟೆಗೆ ಬೆಂಕಿ ಇಟ್ಟಂತಗಾಗಿದೆ. ಹೀಗಾಗಿ ಅರಿಯಾನಾರನ್ನು ಕೊಲೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಅರಿಯಾನಾ ಅಪ್ಪಿತಪ್ಪಿ ಸೊಹೆಲ್ ಕೈಗೆ ಸಿಗಬೇಡಿ. ನಿಮ್ಮಿಂದ ಮತ್ತಷ್ಟು ಮನರಂಜನೆಯನ್ನು ನಾವು ಎದುರು ನೋಡುತ್ತಿದ್ದೇವೆ. ಸೊಹೆಲ್ ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಿ ಎಂದು ನೆಟ್ಟಿಗರು ವಿಡಿಯೋ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ಆರ್ಜಿವಿ ಮತ್ತು ಅರಿಯಾನಾ ಜಿಮ್ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್, ರೊಮ್ಯಾನ್ಸ್, ಸಂಬಂಧ (ಅಫೇರ್) ಮುಂತಾದ ವಿಚಾರಗಳ ಬಗ್ಗೆಯೇ ಇಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅಂದಹಾಗೆ ಈ ಸಂದರ್ಶನ ವರ್ಮ ಅವರು ಆಫೀಸ್ನಲ್ಲೇ ನಡೆದಿದೆ. (ಏಜೆನ್ಸೀಸ್)