ಸಿನಿವಾಣಿ

ಶ್ರದ್ಧಾ ಕಪೂರ್​ ಬಿಕಿನಿ ಫೋಟೋ ವೈರಲ್​! ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಅವತಾರಕ್ಕೆ ಫ್ಯಾನ್ಸ್​ ಫಿದಾ

ಮುಂಬೈ: ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​ ಅವರ ಬಿಕಿನಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಗುಲಾಬಿ ಬಣ್ಣದ ಬಿಕಿನಿ ಧರಿಸಿರುವ ಶ್ರದ್ಧಾ ಬೀಚ್​ನಿಂದ ಹೊರ ಬರುತ್ತಿರುವ ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಕಿನಿ ಫೋಟೋದಲ್ಲಿ ಶ್ರದ್ಧಾರ ಮೈಮಾಟ ನೋಡಿ ಅವರ ಸೌಂದರ್ಯಕ್ಕೆ ಮಾರುಹೋಗಿರುವ ಕೆಲ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಅಂದಹಾಗೆ ರಣಬೀರ್​ ಕಪೂರ್​ ನಟನೆಯ ಲವ್​ ರಂಜನ್​ ಸಿನಿಮಾದಲ್ಲಿ ಶ್ರದ್ಧಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್​ ಸ್ಪೇನ್​ನಲ್ಲಿ ನಡೆಯುತ್ತಿದೆ. ಕಡಲ ಕಿನಾರೆಯಲ್ಲಿ ಶೂಟಿಂಗ್​ ಮಾಡುವಾಗ ಶ್ರದ್ಧಾ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋವನ್ನು ಸರೆಹಿಡಿದು ಜಾಲತಾಣದಲ್ಲಿ ಹರಿಬಿಡಲಾಗಿದೆ.

ಶ್ರದ್ಧಾರ ಫೋಟೋ ನೋಡುತ್ತಿದ್ದಂತೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿರುವ ಫ್ಯಾನ್ಸ್​​ ಪೇಜ್​ಗಳಲ್ಲಿ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ಸದ್ಯ ಫೋಟೋ ಭಾರೀ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ಕೆಲ ಕಾಲ ಟ್ರೆಂಡ್​ನಲ್ಲೂ ಕೂಡ ಇತ್ತು. ಅದೇ ಸಿನಿಮಾಗೆ ಸಂಬಂಧಿಸಿದ ಮತ್ತೊಂದು ಫೋಟೋದಲ್ಲಿ ರಣಬೀರ್​ ಕಪೂರ್​ ಕೂಡ ಗುಲಾಬಿ ಬಣ್ಣದ ಶರ್ಟ್​ ಧರಿಸಿದ್ದಾರೆ. ಸಾಂಗ್​ ಶೂಟಿಂಗ್​ ಎಂದು ಹೇಳಲಾಗಿದೆ.

ತೆರೆಯ ಮೇಲೆ ಶ್ರದ್ಧಾ ಬೋಲ್ಡ್​ ಅವತಾರವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ. ರಣಬೀರ್​ ಮತ್ತು ಶ್ರದ್ಧಾ ಜೋಡಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಲಿದೆ ಎಂದು ನೆಟ್ಟಿಗರು ಕಮೆಂಟಿಸುತ್ತಿದ್ದಾರೆ. (ಏಜೆನ್ಸೀಸ್​)