ಸಿನಿವಾಣಿ

ನಟಿ ಸೌಜನ್ಯ ಸಾವು ಪ್ರಕರಣ: ಇದ್ದಕ್ಕಿದಂತೆ ವರಸೆ ಬದಲಿಸಿದ ಬಾಯ್​ಫ್ರೆಂಡ್​ ಮೇಲೆ ಪೊಲೀಸರ ಗುಮಾನಿ

ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿನ ಪ್ರಕರಣದಲ್ಲಿ ಬಾಯ್​ಫ್ರೆಂಡ್​ ವಿವೇಕ್​ ನಡೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.

ಆತ್ಮಹತ್ಯೆ ದಿನದ ಬೆನ್ನಲ್ಲೇ ಪೊಲೀಸ್​ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದ ವಿವೇಕ್​, ಇದೀಗ ಮತ್ತೆ ವಿಚಾರಣೆಗೆ ಹಾಜರಾಗದೇ ದೂರ ಉಳಿದಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದ್ರೆ, ನೋಟಿಸ್ ನೀಡಿದ್ರೂ ವಿವೇಕ್​ ತನಿಖಾಧಿಕಾರಿಯ ಮುಂದೆ ಹಾಜರಾಗಿಲ್ಲ. ಹೀಗಾಗಿ ವಿವೇಕ್​ ಮೇಲೆ ಅನುಮಾನ ಮೂಡಿದೆ

ಸೌಜನ್ಯ ಆತ್ಮಹತ್ಯೆಯ ಹಿಂದೆ ಬಾಯ್​ಫ್ರೆಂಡ್​ ವಿವೇಕ್​ ಕೈವಾಡವಿತ್ತಾ? ಸೌಜನ್ಯ ಆತ್ಮಹತ್ಯೆ ಮಾಡಿಕೊಂಡ ದಿನ ತಾನು ಆಕೆಯ ಬಳಿಯಲ್ಲೇ ಇರ್ಲಿಲ್ಲ ಎಂದು ವಿವೇಕ್​ ಹೇಳಿದ್ದಾರೆ. ಆದ್ರೆ, ನಿನ್ನೆ ಲಿಖಿತ ರೂಪದಲ್ಲಿ ವಿವೇಕನ ಹೇಳಿಕೆಯನ್ನು ಕುಂಬಳಗೋಡು ಪೊಲೀಸರು ದಾಖಲಿಸಬೇಕಿತ್ತು. ಅದೇ ರೀತಿ ವಿವೇಕನ ಮೊಬೈಲ್‌ ಫೋನ್​ ಮಾಹಿತಿಯನ್ನು ಪೊಲೀಸರು ಕೇಳಿದ್ದರು.

ಇದೀಗ ವಿವೇಕ್​ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಪೊಲೀಸರ‌ ತನಿಖೆಯಿಂದ ಹೆದರಿ ವಿಚಾರಣೆಗೆ ಹಾಜರಾಗದೇ ದೂರ ಉಳಿದಿದ್ದಾರಾ ವಿವೇಕ್ ಎಂಬ ಪ್ರಶ್ನೆ ಮೂಡಿದೆ. ಸವಿ ಮಾದಪ್ಪ ಆತ್ಮಹತ್ಯೆ ಪ್ರಚೋದನೆಗೆ ವಿವೇಕನೇ ಕಾರಣಾನಾ? ಎಂಬ ಸಂಶಯವೂ ಮೂಡಿದೆ. ವಿಚಾರಣೆಗೆ ಹಾಜರಾಗದೇ ವಿವೇಕ್​ ತಲೆಮರೆಸಿಕೊಂಡಿದ್ಯಾಕೆ? ಎಂಬ ಪ್ರಶ್ನೆಗಳು ಆತನ ಮೇಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರ ಕಣ್ಣು ಇದೀಗ ವಿವೇಕನ ಮೇಲೆ ಬಿದ್ದಿದೆ. (ದಿಗ್ವಿಜಯ ನ್ಯೂಸ್​)