ಬೆಂಗಳೂರು: ಪ್ರಸ್ತುತ ಜಮಾನದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್ ಪಾತ್ರಗಳಿಗೂ ಸೈ ಎನ್ನುವ ಆಶಿಕಾ, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಅವತಾರ ಪುರುಷ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಸದ್ಯ ಶೂಟಿಂಗ್ನಿಂದ ಕೊಂಚ ಬಿಡುವು ಪಡೆದುಕೊಂಡಿರುವ ಆಶಿಕಾ, ಪ್ರವಾಸದ ಮೂಡ್ನಲ್ಲಿರುವಂತೆ ಕಾಣುತ್ತಿದೆ.
ಸಹಜ ಸೌಂದರ್ಯದ ಮೂಲಕ ಸ್ಯಾಂಡಲ್ವುಡ್ನ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ, ಸದ್ಯ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಅಲ್ಲಿನ, ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ ಎನ್ನುವುದಕ್ಕೆ ಇನ್ಸ್ಟಾಗ್ರಾಂನಲ್ಲಿ ಅವರು ಹರಿ ಬಿಟ್ಟಿರುವ ಫೋಟೋಗಳೇ ಸಾಕ್ಷಿಯಾಗಿವೆ.
ಆಶಿಕಾ ಅವರು ಥಾಯ್ಲೆಂಡ್ನ ಟಪ್ ಐಲ್ಯಾಂಡ್ ನ್ಯಾಚುರಲ್ ಬೀಚ್ನಲ್ಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಂಪು ಬಣ್ಣದ ಬಿಕಿನಿ ಕಟ್ ಮತ್ತು ಜೀನ್ಸ್ ಶಾರ್ಟ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಟ್ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆಶಿಕಾ ಅವರ ಹಾಟ್ ಅವತಾರ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದೆ.
ಇನ್ಸ್ಟಾಗ್ರಾಂನಲ್ಲಿ ಆಶಿಕಾ ಹರಿಬಿಟ್ಟಿರುವ ಫೋಟೋಗಳು ವೈರಲ್ ಆಗಿದ್ದು, ಈಗಾಗಲೇ 39 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದೆ. ಆಶಿಕಾ ಮೈಮಾಟಕ್ಕೆ ಮನಸೋತಿರುವ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ನಿಮ್ಮ ಬ್ಯೂಟಿಗೆ ನಾವು ಫಿದಾ ಆಗಿದ್ದೇವೆ ಎನ್ನುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪವನ್ ಒಡೆಯರ್ ನಿರ್ದೇಶನದ ಹಾಗೂ ನಟ ಇಶಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರೇಮೋ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ, ಹೆಸರಿಡಿದ ಸಿನಿಮಾಗಳಿಗೆ ಈಗಾಗಲೇ ಆಶಿಕಾ ಸಹಿ ಹಾಕಿದ್ದಾರೆ.