ಸಿನಿವಾಣಿ

ಸಿನಿಮಾ ಮಾಡಿ ಕೈಸುಟ್ಟುಕೊಂಡ ಬಳಿಕ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ಸ್ಯಾಂಡಲ್​ವುಡ್​ ನಿರ್ಮಾಪಕ!

ಬೆಂಗಳೂರು: ಹಣಕ್ಕಾಗಿ ಸ್ಯಾಂಡಲ್​ವುಡ್​ ನಿರ್ಮಾಪಕನೊಬ್ಬ ಅಡ್ಡದಾರಿ ಹಿಡಿದು ಇದೀಗ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ಬಳಿಕ ವಂಚನೆಗೆ ಇಳಿದಿದ್ದ ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಬಂಧಿತ ಆರೋಪಿಗಳನ್ನು ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ.

ನಿರ್ಮಾಪಕ ಮಂಜುನಾಥ್​ ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ಈ ಸಿನಿಮಾ‌ ನಿರ್ಮಾಣ ಮಾಡಿದ್ದರು. ಆದರೆ, ಸಿನಿಮಾ ಬಿಡುಗಡೆ ಬಳಿಕ ಚಿತ್ರ ಯಶಸ್ಸು ಕಾಣದೇ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತು. ಹೂಡಿದ್ದ ಬಂಡವಾಳವೂ ಸಹ ವಾಪಸ್​ ಬರಲಿಲ್ಲ.

ಸಿನಿಮಾ ಮಾಡಿ ಜೇಬಿಗೆ ಕತ್ತರಿ ಹಾಕಿಕೊಂಡ ಬಳಿಕ ಸಿನಿಮಾ ಸಹವಾಸವೇ ಬೇಡ ಅಂತಾ ರಾಜಾಜಿನಗರದಲ್ಲಿ ಸೈಟ್, ನಿವೇಶನಗಳನ್ನು ಸೇಲ್ ಮಾಡಿಸುವುದಾಗಿ ಒಂದು ಕಂಪನಿಯನ್ನು ತೆಗೆದಿದ್ದರು. ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಎಂಬ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ನಿವೇಶನ ಮಾರಾಟ ಮಾಡುವುದಾಗಿ ಜಾಹಿರಾತು ನೀಡಿದ್ದರು. ಅದನ್ನು ನೋಡಿ ಪುಷ್ಪಕುಮಾರ್​ ಎಂಬ ವ್ಯಕ್ತಿ ನಿರ್ಮಾಪಕ ಮಂಜುನಾಥ್​ನನ್ನು ಸಂಪರ್ಕ ಮಾಡಿದ್ದರು.

ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ಪುಷ್ಪಕುಮಾರ್​ ಅವರಿಂದ ಮಂಜುನಾಥ್​ 2 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಬೇರೆ ಯಾರದ್ದೋ ಸೈಟ್ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದರು. ಸೈಟ್​ಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಕೇಳಿದಾಗ ನಿರ್ಮಾಪಕನ ಬಂಡವಾಳ ಬಯಲಾಗಿದೆ. ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪುಷ್ಪಕುಮಾರ್​ ದೂರು ನೀಡಿದ್ದರು. ಇದೀಗ ಈ ಪ್ರಕರಣದ ಅಡಿಯಲ್ಲಿ ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)