ಸಿನಿವಾಣಿ

ಅಯ್ಯೋ ದೇವರೆ ಇದು ನೀವಾ? ಅಲ್ಲು ಅರ್ಜುನ್​ ನೋಡಿ ಒಂದು ಕ್ಷಣ ಕನ್ಫ್ಯೂಸ್​ ಆದ ಕಿರಿಕ್​ ಬ್ಯೂಟಿ!

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರ ಫೋಟೋ ನೋಡಿ ನಟಿ ರಶ್ಮಿಕಾ ಮಂದಣ್ಣ ಗೊಂದಲಕ್ಕೀಡಾಗಿದ್ದನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕ್ಷಣ ಅಲ್ಲು ಅರ್ಜುನ್​ ಅವರನ್ನು ಗುರುತು ಹಿಡಿಯಲು ಆಗಲೇ ಇಲ್ಲ ಎಂದಿದ್ದಾರೆ.

ಜುಲೈ 29ರಂದು ಅಲ್ಲು ಅರ್ಜುನ್​ ಅವರು ತಮ್ಮ ಟ್ವಿಟರ್​ನಲ್ಲಿ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಾಲ್ಟ್​ ಆ್ಯಂಡ್​ ಪೆಪ್ಪರ್​ ಲುಕ್​ನಲ್ಲಿ ಕಾಣಿಸಿಕೊಂಡಿರು ಅಲ್ಲು, ಕಪ್ಪು ಬಣ್ಣದ ಸ್ಟೈಲಿಶ್​ ಕನ್ನಡಕ ಹಾಗೂ ಕೈಯಲ್ಲಿ ಸಿಗಾರ್​ ಹಿಡಿದು ಬಹಳ ಸ್ಟೈಲಿಶ್​ ಆಗಿ ಪೋಸ್​​ ನೀಡಿದ್ದಾರೆ.

ಅಲ್ಲು ಅರ್ಜುನ್​ ಫೋಟೋ ನೋಡಿ ಗೊಂದಲ್ಲಕ್ಕೀಡಾದ ರಶ್ಮಿಕಾ ಮಂದಣ್ಣ, ಅಯ್ಯೋ ದೇವರೆ, ಒಂದು ಸೆಕೆಂಡ ನನ್ನ ಕೈಯಲ್ಲಿ ಗುರುತು ಹಿಡಿಯಲು ಆಗಲೇ ಇಲ್ಲ ಸರ್​ ಎಂದು ಟ್ವೀಟ್​ ಮಾಡಿದ್ದಾರೆ.

ರಶ್ಮಿಕಾ ಗೊಂದಲಕ್ಕೀಡಾಗಿರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಅಲ್ಲು ಅರ್ಜುನ್​ ಫೋಟೋ ನೋಡಿದರೆ ತಕ್ಷಣಕ್ಕೆ ಅವರೆಂದು ಗೊತ್ತಾಗುವುದೇ ಇಲ್ಲ. ಏಕೆಂದರೆ, ಇದುವರೆಗೂ ಕಾಣದ ವಿಭಿನ್ನ ಫೋಟೋ ಇದಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಮೊದಲ ಭಾಗ ತೆರೆಕಂಡು ಅದ್ಭುತ ಯಶಸ್ಸು ಗಳಿಸಿದ್ದು, ಎರಡನೇ ಭಾಗದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. (ಏಜೆನ್ಸೀಸ್​)​