ಸಿನಿವಾಣಿ

ಸ್ನೇಹಿತನೊಂದಿಗೆ ಅಫೇರ್​: ಸಂದರ್ಶನದಲ್ಲಿ ಕುತೂಹಲ ತೆರೆದಿಟ್ಟ ಬಹುಭಾಷಾ ನಟಿ ಪ್ರಿಯಾಮಣಿ

ಹೈದರಾಬಾದ್​: ಬಹುಭಾಷಾ ನಟಿ ಪ್ರಿಯಾಮಣಿ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರ ಕುರಿತಾದ ಪ್ರಶ್ನೆಗೆ ಬಹಳ ಜಾಣ್ಮೆಯಿಂದ ಉತ್ತರಿಸಿದ ಪ್ರಸಂಗ ಜರುಗಿತು.

ಮದುವೆ ನಂತರ ಸಿನಿಮಾ ಮೇಲಿನ ಜೋಶ್​ ಕಳೆದುಕೊಂಡಿರುವ ಪ್ರಿಯಾಮಣಿ ಸಿನಿಮಾದಿಂದ ಕಿರುತೆರೆಗೆ ತಮ್ಮ ಹಾದಿಯನ್ನು ಬದಲಿಸಿದರು. ಹಲವು ದಿನಗಳ ಬಳಿಕ ಇದೀಗ ಮತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಎರಡನೇ ಇನ್ನಿಂಗ್ಸ್​ ಶುರು ಮಾಡಿರುವ ಪ್ರಿಯಾಮಣಿ, ಸಿನಿಮಾ, ವೆಬ್​ ಸೀರಿಸ್​ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ.

ಇತ್ತಿಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಸ್ನೇಹಿತನೊಬ್ಬನ ಜತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಮಣಿ ಅವರು ಕಳೆದ ವರ್ಷ ತೆರೆಕಂಡ "ಫ್ಯಾಮಿಲಿ ಮ್ಯಾನ್​" ವೆಬ್​ ಸೀರಿಸ್​ನಲ್ಲಿ ನಟಿಸಿದ್ದಾರೆ. ವೆಬ್​ ಸೀರಿಸ್​ನಲ್ಲಿ ಸುಚಿತ್ರಾ ಹೆಸರಿನ ನಾಯಕ ಮನೋಜ್​ ಬಾಜ್ಪಾಯಿ ಪತ್ನಿಯ ಪಾತ್ರವನ್ನು ಪ್ರಿಯಾಮಣಿ ನಿರ್ವಹಿಸಿದ್ದಾರೆ.

ಈ ನಡುವೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಪ್ರಿಯಾಮಣಿ ತನ್ನ ಕುಟುಂಬವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಸ್ನೇಹಿತರು ಸ್ಥಾಪಿಸಿದ ಸ್ಟಾರ್ಟ್​ಅಪ್​ ಕಂಪನಿಯಲ್ಲಿ ಪಾಲುದಾರಳಾಗಲು ಉಪನ್ಯಾಸಕ ಕೆಲಸವನ್ನು ಬಿಟ್ಟಿದ್ದರಂತೆ. ಈ ಸಂದರ್ಭದಲ್ಲಿ ಆ ಕಂಪನಿಯ ಪಾಲುದಾರ ಅಥವಾ ಸ್ನೇಹಿತನೊಂದಿಗೆ ಅಫೇರ್​ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತಂತೆ.

ಅನೇಕ ಜನರು ಈ ಬಗ್ಗೆ ಸ್ನೇಹಿತನ ಬಳಿಯು ಕೇಳಿದ್ದರು. ಅವನೊಂದಿಗೆ ಸಂಬಂಧವಿದೆಯೇ ಎಂದು ನನ್ನನ್ನೂ ಕೇಳಿದ್ದಾರೆ. ಆದರೆ, ನೀವು ನಿಜವಾಗಿಯೂ ಅವರೊಂದಿಗೆ ಸಂಬಂಧ ಹೊಂದಿದ್ದೀರಾ? ಈ ಪ್ರಶ್ನೆಗೆ ಉತ್ತರ ಬೇಕಾದರೆ ನೀವು ಫ್ಯಾಮಿಲಿ ಮ್ಯಾನ್​ ಎರಡನೇ ಸರಣಿಯವರೆಗೆ ಕಾಯಬೇಕು ಎಂದರು. ಈ ಮೂಲಕ ಎರಡನೇ ಸರಣಿಯ ಪ್ರಮೋಷನ್​ಗೆ ಪ್ರಚೋದನೆ ನೀಡುವುದರೊಂದಿಗೆ ಪ್ರಶ್ನೆಗೆ ಸ್ಪಷ್ಟನೆ ನೀಡದೇ ಪ್ರಶ್ನೆಯಾಗಿಯೇ ಕುತೂಹಲ ಕಾಯ್ದಿರಿಸಿದರು.

ಅಂದಹಾಗೆ ಫ್ಯಾಮಿಲಿ ಮ್ಯಾನ್ -2 ವೆಬ್​ ಸೀರಿಸ್​ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಜೂನ್ 4ರಂದು ಪ್ರೀಮಿಯರ್​ ಆಗಲಿದೆ. ಸಮಂತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ, ವಿಕ್ಟರಿ ವೆಂಕಟೇಶ್​ ಅಭಿನಯದ ನಾರಪ್ಪ ಚಿತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದಾರೆ. (ಏಜೆನ್ಸೀಸ್​)