ಸಿನಿವಾಣಿ

ತನ್ನೊಂದಿಗೆ ಮಲಗುವಂತೆ ನಟಿಗೆ ಆಹ್ವಾನ ನೀಡಿದ ಪ್ರಾಧ್ಯಾಪಕ: ಜಾಲತಾಣದಲ್ಲಿ ಅಳಲು ತೋಡಿಕೊಂಡ ನಟಿ!

ಚೆನ್ನೈ: ಇಂದು ಪ್ರತಿಯೊಬ್ಬರಿಗೂ ಸಹ ಸಾಮಾಜಿಕ ಜಾಲತಾಣ ಪ್ರವೇಶ ಮುಕ್ತವಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ಸೆಲೆಬ್ರಿಟಿಗಳು ಟ್ರೋಲ್​ ಆಗುವುದು ಸಾಮಾನ್ಯವಾಗಿದೆ. ಅಲ್ಲದೆ, ಕೆಲವೊಮ್ಮೆ ನೆಟ್ಟಿಗರಿಂದ ಮುಜುಗರ ಸಹ ಅನುಭವಿಸುತ್ತಾರೆ. ಇಂಥಹ ಸನ್ನಿವೇಶಗಳನ್ನು ಸೆಲೆಬ್ರಿಟಿಗಳು ಹಂಚಿಕೊಳ್ಳುವುದು ಸಹ ಇದೇ ಜಾಲತಾಣ ವೇದಿಕೆಯಲ್ಲೆ.

ತಮಿಳು ನಟಿ ಸೌಂದರ್ಯ ನಂದಕುಮಾರ್​ ಅವರು ಪ್ರಾಧ್ಯಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದಾರೆ. ತಾನೊಬ್ಬ ಲೆಕ್ಚರರ್​ ಎಂದು ಇನ್​​ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಕೆಟ್ಟದಾಗಿ ಮಾತನಾಡುವ ಮೂಲಕ ನಟಿಗೆ ಕಿರುಕುಳ ನೀಡಿದ್ದಾರೆ.

ನೀನು ನನ್ನೊಂದಿಗೆ ಮಲಗುವೆಯಾ? ಮಲಗುವುದಾದರೆ ನೀನು ಏನು ಕೇಳಿದರೂ ಕೊಡುತ್ತೇನೆ. ನೀನು ನನ್ನೊಂದಿಗೆ ಮಲಗಬೇಕು ಎಂದು ಲೆಕ್ಚರರ್​ ಮೆಸೇಜ್​ ಮಾಡಿರುವುದಾಗಿ ನಟಿ ಸೌಂದರ್ಯ ತಿಳಿಸಿದ್ದಾರೆ. ಅಂತಹ ಸಂದರ್ಭದಲ್ಲಿ ನನಗೆ ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯಲಿಲ್ಲ ಎಂದಿದ್ದಾರೆ,

ಆದಾಗ್ಯೂ ಕೊನೆಯಲ್ಲಿ ಆತನ ನಡೆಯನ್ನು ಖಂಡಿಸಿರುವ ನಟಿ ಸೌಂದರ್ಯ ಪೊಲೀಸರು ಇಂತವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಲ್ಲಿರುವವರನ್ನು ಪೊಲೀಸರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಉಪನ್ಯಾಸಕರು ತಾವು ಕೆಲಸ ಮಾಡುವ ಕಾಲೇಜಿನಲ್ಲಿಯೂ ಇದನ್ನೇ ಹೇಳುತ್ತಾರೆಂದು ತಿಳಿದಾಗ ಸೌಂದರ್ಯ ನಂದಕುಮಾರ್ ಶಾಕ್​ ಆಗಿದೆ. ಜವಬ್ದಾರಿಯುತ ವೃತ್ತಿಯಲ್ಲಿರುವ ವ್ಯಕ್ತಿ ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಎಂದು ಪ್ರಶ್ನಿಸಿರುವ ಸೌಂದರ್ಯ, ಆತ ಮಾಡಿರುವುದು ದೊಡ್ಡ ತಪ್ಪು ಎಂದಿದ್ದಾರೆ. ಅನೇಕ ಸಿನಿಮಾ ಮತ್ತು ಟಿವಿ ಸೀರಿಯಲ್​ಗಳಲ್ಲಿ ಸೌಂದರ್ಯ ನಟಿಸಿದ್ದಾರೆ. (ಏಜೆನ್ಸೀಸ್​)