ಸಿನಿವಾಣಿ

ನಟ ಮಹೇಶ್​ ಬಾಬುಗೆ ಕಪಾಳ ಮೋಕ್ಷ ಮಾಡಿ ಕ್ಷಮೆಯಾಚಿಸಿದ ಕೀರ್ತಿ ಸುರೇಶ್​! ನಡೆದಿದ್ದೇನು? ಇಲ್ಲಿದೆ ಸ್ಫೋಟಕ ಮಾಹಿತಿ

ಹೈದರಾಬಾದ್​: ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ನಟನೆಯ "ಸರ್ಕಾರು ವಾರಿ ಪಾಠ" ಚಿತ್ರದಲ್ಲಿ ಸೌತ್​ ಬ್ಯೂಟಿ ಕೀರ್ತಿ ಸುರೇಶ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ವರ್ಷಗಳ ಅಂತರದ ಬಳಿಕ ಬಿಡುಗಡೆಯಾಗುತ್ತಿರುವ ಮಹೇಶ್​ ಬಾಬು ಅವರ ಮೊದಲ ಸಿನಿಮಾ ಇದಾಗಿದ್ದು, ಪರುಶರಾಮ್​ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಕೀರ್ತಿ ಸುರೇಶ್​, ಶೂಟಿಂಗ್​ ಸಮಯದಲ್ಲಿ ತಾನು ಮಾಡಿದ ಎಡವಟ್ಟೊಂದನ್ನು ಬಹಿರಂಗಪಡಿಸಿದ್ದಾರೆ. ಹಾಡಿನ ಚಿತ್ರೀಕರಣದ ವೇಳೆ ಕೀರ್ತಿ ಸುರೇಶ್​ ಅವರು ಆಕಸ್ಮಿಕವಾಗಿ ಮಹೇಶ್​ ಬಾಬು ಅವರ ಕಪಾಳಕ್ಕೆ ಬಾರಿಸಿದ್ದರಂತೆ.

ನಾವು ಹಾಡಿನ ಚಿತ್ರೀಕರಣ ಮಾಡುತ್ತಿದ್ದೆವು. ಈ ವೇಳೆ ನನ್ನ ಕಡೆಯಿಂದ ಸಮನ್ವಯ ದೋಷವಿತ್ತು ಮತ್ತು ನಾನು ಮಹೇಶ್​ ಸರ್​ ಅವರ ಮುಖಕ್ಕೆ ಆಕಸ್ಮಿಕವಾಗಿ ಹೊಡೆದಿದ್ದೆ. ತಕ್ಷಣ ನಾನು ಕ್ಷಮೆಯಾಚಿಸಿದೆ. ಪರವಾಗಿಲ್ಲ, ಚಿಂತಿಸಬೇಡಿ ಎಂದು ತುಂಬಾ ಶಾಂತವಾಗಿಯೇ ಮಹೇಶ್​ ಸರ್​ ಪ್ರತಿಕ್ರಿಯಿಸಿದರು ಎಂದು ಕೀರ್ತಿ ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸರ್ಕಾರು ವಾರಿ ಪಾಠ ಚಿತ್ರ ಮೇ 12ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಉತ್ತಮ ಸ್ಪಂದನೆ ಪಡೆದುಕೊಂಡಿದೆ. (ಏಜೆನ್ಸೀಸ್​)