ಸಿನಿವಾಣಿ

ಯುವತಿಯೊಬ್ಬಳ ಜತೆ ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡ ನಟ ಧನುಷ್: ಯಾರು ಆ ಯುವತಿ?

ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಪುತ್ರಿ ಐಶ್ವರ್ಯಾ ಜತೆಗಿನ ವೈವಾಹಿಕ ಸಂಬಂಧಕ್ಕೆ ಬ್ರೇಕ್​ ಹಾಕಿ, ಡಿವೋರ್ಸ್​ ಘೋಷಣೆ ಮಾಡಿದಾಗಿನಿಂದ ನಟ ಧನುಷ್​ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.

ಧನುಷ್​ ಅವರು ಸೆಲ್ವರಾಘವನ್​ ನಿರ್ದೇಶನದ "ನಾನೇ ವರುವೆನ್​" ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಊಟಿಯಲ್ಲಿ ಬೀಡುಬಿಟ್ಟಿತ್ತು. ಈ ವೇಳೆ ಹಿರಿಯ ಮಗ ಯಾತ್ರ ಜತೆ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಫೋಟೋವನ್ನು ಧನುಷ್ ಸಾಮಾಜಿಕ ಜಾಲತಾಣದಲ್ಲಿ​ ಶೇರ್​ ಮಾಡಿಕೊಂಡಿದ್ದರು. ಫೋಟೋ ವೈರಲ್​ ಆಗಿತ್ತು.

ಇದೀಗ ಧನುಷ್​ ಹೈದರಾಬಾದ್​ಗೆ ವಾಪಸ್ಸಾಗಿದ್ದು, ವೆಂಕಿ ಅಟ್ಲುರಿ ನಿರ್ದೇಶನದ ತೆಲುಗು/ತಮಿಳು/ಹಿಂದಿ ತ್ರಿಭಾಷ ಸಿನಿಮಾದ ಶೂಟಿಂಗ್​ಗಾಗಿ ಹೈದರಾಬಾದ್​ನಲ್ಲಿ ಬೀಡುಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಧನುಷ್​ಗೆ ಸಂಯುಕ್ತ ಮೆನನ್​ ನಾಯಕಿಯಾಗಿದ್ದಾರೆ.

ಬಹುಮುಖ ಪ್ರತಿಭೆಯಾಗಿರುವ ಧನುಷ್​ ಇತ್ತೀಚೆಗಷ್ಟೇ ಹೈದರಾಬಾದ್​ನ 1980 ಮಿಲಿಟರಿ ಹೋಟೆಲ್​ನಲ್ಲಿ ಊಟಕ್ಕೆಂದು ಭೇಟಿ ನೀಡಿದ್ದರು. ಕಪ್ಪು ಬಣ್ಣದ ಹೂಡಿ ಮತ್ತು ಅದೇ ಬಣ್ಣದ ಕ್ಯಾಪ್​ ಧರಿಸಿ ಊಟ ಸವಿಯುತ್ತಿರುವ ಫೋಟೋ ವೈರಲ್​ ಆಗಿದೆ. ಆದರೆ, ಅದೇ ಫೋಟೋದಲ್ಲಿ ಧನುಷ್​ ಪಕ್ಕ ಯುವತಿಯೊಬ್ಬಳು ಕುಳಿತಿದ್ದು, ಆಕೆ ಯಾರಿರಬಹುದು ಎಂಬ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರಶ್ನೆಗೆ ಈವರೆಗೂ ಉತ್ತರ ದೊರೆತಿಲ್ಲ. ಆದರೆ, ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಧನುಷ್ ಮತ್ತು ಮಾಳವಿಕಾ ಮೋಹನನ್ ನಟಿಸಿರುವ 'ಮಾರನ್' ಮತ್ತು ಹಾಲಿವುಡ್ ಚೊಚ್ಚಲ ಸಿನಿಮಾ 'ದಿ ಗ್ರೇ ಮ್ಯಾನ್' ಹಾಗೂ ಸನ್ ಪಿಕ್ಚರ್ಸ್ ನಿರ್ಮಿಸಿರುವ 'ತಿರುಚಿರಂಬಲಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್​)