ಸಿನಿವಾಣಿ

ದಿವ್ಯಾ ಶ್ರೀಧರ್ ಮೇಲೆ ಗಂಡನಿಂದ ಹಲ್ಲೆ ಪ್ರಕರಣ: ನಟಿಯ ಬೆನ್ನಿಗೆ ನಿಂತ ಕರ್ನಾಟಕ ಮಹಿಳಾ ಆಯೋಗ

ಬೆಂಗಳೂರು: ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರ ಮೇಲೆ ಆಕೆಯ ಗಂಡನಿಂದ ನಡೆದಿರುವ ದೌರ್ಜನ್ಯ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಿರುವ ಕರ್ನಾಟಕದ ಮಹಿಳಾ ಆಯೋಗ ನಟಿಗೆ ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ತಮಿಳುನಾಡು ಮಹಿಳಾ ಆಯೋಗಕ್ಕೆ ಮನವಿ ಮಾಡಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ತಮಿಳುನಾಡು ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವುದಲ್ಲದೆ, ದೂರವಾಣಿ ಮೂಲಕವೂ ಮಾತುಕತೆ ನಡೆಸಿದ್ದಾರೆ.

ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಹಾಗೂ ಮಾನಸಿಕ ಕಿರಿಕಿರಿಗೆ ಒಳಗಾಗಿದ್ದಾರೆ. ಗರ್ಭಿಣಿ ಅನ್ನೋದನ್ನು ಮರೆತು ಆಕೆಯ ಪತಿ ಹೊಟ್ಟೆಗೆ ಒದ್ದಿದ್ದಾರೆ. ಈ ಬಗ್ಗೆ ಸ್ವತಃ ನಟಿಯೇ ಮಾಧ್ಯಮಗಳಲ್ಲಿ ನೀಡಿರುವ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಹೆಣ್ಣು ಮಗುವಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಿ ಎಂದು ಪ್ರಮೀಳಾ ನಾಯ್ಡು ಆಗ್ರಹಿಸಿದ್ದಾರೆ.

ಕನ್ನಡದ ಆಕಾಶ ದೀಪ ಧಾರಾವಾಹಿ ಮೂಲಕ ದಿವ್ಯಾ ಶ್ರೀಧರ್ ಮನೆ ಮಾತಾಗಿದ್ದಾರೆ. ತಮಿಳು ಧಾರಾವಾಹಿ ಮಾಡುವಾಗ ನಟ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದ ದಿವ್ಯಾ, ವೈವಾಹಿಕ ಜೀವನ ಸಹ ಆರಂಭಿಸಿದರು. ಇದೀಗ ಪತಿ ಆರ್ನವ್ ವಿರುದ್ಧ ಸಾಲು ಆರೋಪ ಮಾಡಿದ್ದಾರೆ. ತನ್ನ ಗಂಡನಿಗೆ ಅನೈತಿಕ ಸಂಬಂಧವಿದೆ. ಹೀಗಾಗಿ ನನ್ನನ್ನು ದೂರ ಇಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ.

‘2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್​ನಲ್ಲಿ ಆ್ಯಕ್ಟಿಂಗ್​ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್​ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ. ಕರೊನಾ ಲಾಕ್​ಡೌನ್​ ವೇಳೆ ಅವನು 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಮಗು ಮಾಡಿಕೊಳ್ಳುವ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಜಗಳ ಆರಂಭವಾಯಿತು. ನನಗೆ ಮಗು ಬೇಕು. ಆದರೆ, ನನ್ನ ಗಂಡ ಗರ್ಭಪಾತ ಮಾಡಿಸಿ ಕೊಳ್ಳಲು ಒತ್ತಾಯ ಮಾಡಿದ್ದಾರೆ ಎಂದು ದಿವ್ಯಾ ದೂರು ನೀಡಿದ್ದಾರೆ. ಈ ಜಗಳ ತಾರಕಕ್ಕೇರಿ ದೈಹಿಕ ಹಲ್ಲೆಗೆ ಒಳಗಾಗಿ ಸದ್ಯ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್​ ಎಂದು ಹೇಳಿಕೊಂಡಿದ್ದನಂತೆ. ಅಸಲಿ ಹೆಸರು ಅಮ್ಜದ್​ ಖಾನ್​. ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಇದು ಲವ್​ ಜಿಹಾದ್ ಇರಬಹುದಾ ಎಂಬ ಅನುಮಾನ ಹುಟ್ಟುಹಾಕಿದೆ. (ದಿಗ್ವಿಜಯ ನ್ಯೂಸ್​)