ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಾಲಿವುಡ್ ಬ್ಯೂಟಿ ದಿಶಾ ಪಟಾಣಿ ಅವರು ಇನ್ಸ್ಟಾಗ್ರಾಂನಲ್ಲಿ ಯಾವಾಗಲೂ ಬಿಕಿನಿ ಫೋಟೋಗಳನ್ನೇ ಹೆಚ್ಚಾಗಿ ಹರಿಬಿಡುತ್ತಿರುತ್ತಾರೆ. ಸದಾ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ದಿಶಾ, ಇದೀಗ ನೆಟ್ಟಿಗರೊಬ್ಬರ ಬೇಡಿಕೆಯನ್ನು ವಿಚಿತ್ರವಾಗಿ ಈಡೇರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಪ್ರವಾಸ ಪ್ರಿಯೆ ಆಗಿರುವ ದಿಶಾ, ಶೂಟಿಂಗ್ ವಿರಾಮದ ವೇಳೆ ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಸಖತ್ ಎಂಜಾಯ್ ಮಾಡುತ್ತಾರೆ. ಅಲ್ಲದೆ, ಈ ವೇಳೆ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಹೆಚ್ಚಾಗಿ ಬಿಕಿನಿ ಫೋಟೋಗಳನ್ನೇ ಹರಿಬಿಡುತ್ತಿರುತ್ತಾರೆ.
ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ದಿಶಾ ಅವರು "ಆಸ್ಕ್ ಮಿ ಎನಿಥಿಂಗ್" ಸೆಷನ್ಸ್ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ದಿಶಾ ತಿಳಿಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ನಿಮ್ಮ ಯಾವುದಾದರೊಂದು ಒಳ್ಳೆಯ ಬಿಕಿನಿ ಫೋಟೋ ಕೊಡಿ ಎಂದು ಕೇಳಿದ್ದ. ಇದಕ್ಕೆ ಖಡಕ್ ಉತ್ತರ ನೀಡಿರುವ ದಿಶಾ, ಪಾಂಡಾ ರೀತಿಯ ಪ್ರಾಣಿ, ಬಿಕಿನಿ ತೊಟ್ಟಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ದಿಶಾ, 2022 ರಲ್ಲಿ ಎರಡು ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್‌ನ ಆಕ್ಷನ್-ಫ್ರಾಂಚೈಸ್ 'ಯೋಧ' ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜತೆ ನಟಿಸಿದ್ದಾರೆ. ಮೋಹಿತ್ ಸೂರಿ ಅವರ 'ಏಕ್ ವಿಲನ್ ರಿಟರ್ನ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)