ಸಿನಿವಾಣಿ

ಜಾಸ್ತಿ ಹಣ ಕೊಟ್ಟರೆ ಓಕೆ! ಸೌತ್​ ಬ್ಯೂಟಿ ಅಮಲಾ ಪೌಲ್ ಕುರಿತ ಬಿಸಿ ಬಿಸಿ ಸುದ್ದಿ ಇದು​

ಹೈದರಾಬಾದ್​: ಒಂದು ಸಿನಿಮಾದಿಂದ ನಟಿಯೊಬ್ಬರು ಹೊರಗಡೆ ಬಂದರೆ ಮತ್ತೊಬ್ಬ ನಟಿಗೆ ಬಂಪರ್​ ಅಂದರೆ ತಪ್ಪಾಗಲಾರದು. ವೈಯಕ್ತಿಕ ಕಾರಣಗಳಿಂದ ಕಾಜಲ್​ ಅಗರ್ವಾಲ್​ ಅವರು ನಾಗಾರ್ಜುನ​ ಅಕ್ಕಿನೇನಿ ನಟನೆಯ "ಘೋಸ್ಟ್​" ಸಿನಿಮಾದಿಂದ ಹೊರಬಂದಿದ್ದಾರೆ. ಇದೀಗ ಅವರ ಜಾಗಕ್ಕೆ ಸೌತ್​ ಬ್ಯೂಟಿ ಅಮಲಾ ಪೌಲ್​ ಬಂದಿದ್ದಾರೆ.

ಇನ್ನು "ಘೋಸ್ಟ್​" ಸಿನಿಮಾದಲ್ಲಿ ಫ್ಲ್ಯಾಶ್​ಬ್ಯಾಕ್​ ದೃಶ್ಯವೊಂದು ಇರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಫ್ಲ್ಯಾಶ್​ಬ್ಯಾಕ್​ನಲ್ಲಿ ನಾಗಾರ್ಜುನ ಮತ್ತು ಅಮಲಾ ಪೌಲ್​ ಪ್ರೀತಿಯಲ್ಲಿ ಬೀಳುವ ಮತ್ತು ಬೆಟ್ಟಗಳ ಸೌಂದರ್ಯದ ನಡುವೆ ಇಬ್ಬರ ರೊಮ್ಯಾಂಟಿಕ್​ ದೃಶ್ಯಗಳಿವೆ. ಈಗಾಗಲೇ ಅದಕ್ಕೆ ಪೂರಕವಾಗಿ ಹೈದರಾಬಾದ್​ ರಾಮೋಜಿರಾವ್​ ಫಿಲ್ಮ್​ ಸಿಟಿಯಲ್ಲಿ ಒಳಾಂಗಣ ಚಿತ್ರೀಕರಣ ಮಾಡಲಾಗಿದೆ.

ಚಿತ್ರದಲ್ಲಿ ನಾಯಕ-ನಾಯಕಿ ನಡುವೆ ಕೆಲವೊಂದು ಇಂಟಿಮೇಟ್​ ದೃಶ್ಯಗಳಿದ್ದು, ಅವುಗಳನ್ನು ತುಂಬಾ ರೊಮ್ಯಾಂಟಿಕ್​ ಆಗಿ ಚಿತ್ರೀಕರಿಸಲು ನಿರ್ದೇಶಕ ಪ್ರವೀಣ್​ ಸತ್ತಾರು ನಿರ್ಧರಿಸಿದ್ದಾರೆ. ಲಿಪ್​ಲಾಕ್​ ದೃಶ್ಯವು ಒಳಗೊಂಡಿರುವುದರಿಂದ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಲು ಅಮಲಾ ಹೆಚ್ಚಿಗೆ ಹಣ ಕೇಳಿದ್ದಾರೆಂದು ಟಾಲಿವುಡ್​ ಮೂಲಗಳು ಮಾಹಿತಿ ನೀಡಿವೆ.

ಮೊದಲೇ ನಾಗಾರ್ಜನ ಅವರಿಗೆ ವಯಸ್ಸಾಗಿರುವುದರಿಂದ ಅವರೊಂದಿಗೆ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸುವುದು ಇರುಸು ಮುರುಸಾಗುವುದು ಸಹಜ. ಹೀಗಾಗಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ. ಆದರೆ, ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಇಬ್ಬರ ನಡುವಿನ ಇಂಟಿಮೇಟ್​ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಹೇಳಲಾಗುತ್ತಿದೆ.

ಘೋಸ್ಟ್​ ಚಿತ್ರ ಪ್ರಗತಿಯಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಇಡೀ ಚಿತ್ರದ ಶೂಟಿಂಗ್​ ಮುಗಿಯಲಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)