ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ತನ್ನ 8ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೂ ಎರಡೇ ವಾರದಲ್ಲಿ ಶೋ ಮುಕ್ತಾಯವಾಗಲಿದ್ದು, ಈ ಬಾರಿ ಯಾರು ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ ಮತ್ತು ಲೆಕ್ಕಾಚಾರಗಳು ಸಹ ಶುರುವಾಗಿದೆ.
ಕರೊನಾ ಲಾಕ್ಡೌನ್ನಿಂದ 75 ದಿನಕ್ಕೆ ಮೊಟಕುಗೊಂಡಿದ್ದ ಬಿಗ್ಬಾಸ್ ಶೋ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿ ಎಲ್ಲರಿಗೂ ಸರ್ಪ್ರೈಸ್ ನೀಡಿತು. ಇದೀಗ ಅಂತಿಮ ಹಂತಕ್ಕೆ ಬಂದಿದೆ. ಇದರ ಮಧ್ಯೆ ಬಿಗ್ಬಾಸ್ ಶೋ ನಿರ್ದೇಶಕ ಶ್ರೀನಿವಾಸ್, ಬಿಗ್ ಮನೆಯ ಪ್ರಖ್ಯಾತ ಜೋಡಿಗಳಾದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಕುರಿತು ಸ್ಪೋಟಕ ಸುದ್ದಿಯೊಂದನ್ನು ಹೊರಗಾಕಿದ್ದಾರೆ.
ರಿಯಾಲಿಟಿ ಶೋನಲ್ಲಿ ಟಾಸ್ಕ್ಗಳಿಗಿಂತಲೂ ಲವ್ ಟ್ರ್ಯಾಕ್ನಿಂದಲೇ ಅರವಿಂದ್ ಮತ್ತು ದಿವ್ಯಾ ಯು ಸದ್ದು ಮಾಡಿದ್ದೇ ಹೆಚ್ಚು. ಅದರಲ್ಲೂ ಕಲರ್ಸ್ ಕನ್ನಡವೂ ಸಹ ಅವರಿಬ್ಬರನ್ನು ಹೆಚ್ಚೆಚ್ಚು ತೆರೆಯ ಮೇಲೆ ತೋರಿಸಿದೆ. ಒಬ್ಬರಿಗೊಬ್ಬರು ಪರಸ್ಪರ ಹೆಚ್ಚು ಆರೈಕೆ ಮಾಡುವುದನ್ನು ನೋಡಿದರೆ ಇಬ್ಬರ ನಡುವೆ ನಿಜವಾದ ಪ್ರೀತಿ ಇದೆ ಎಂದು ಹೇಳಬಹುದು. ಆದರೂ ಕೆಲವರು ಇಬ್ಬರ ನಡುವೆ ಇರುವುದು ನಕಲಿ ಪ್ರೀತಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶೋನಲ್ಲಿ ಜನರ ಗಮನವನ್ನು ತಮ್ಮತ್ತ ಸೆಳೆಯಲು ಹೀಗೆ ಮಾಡುತ್ತಿದ್ದಾರೆ ಎಂಬ ಅಪವಾದವೂ ಇದೆ. ಆದರೆ, ಆ ಅಪವಾದವನ್ನು ಶೋ ನಿರ್ದೇಶಕ ಶ್ರೀನಿವಾಸ್ ತೊಡೆದು ಹಾಕಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿರುವ ಶ್ರೀನಿವಾಸ್, ದಿವ್ಯಾ ಉರುಡುಗ ಮತ್ತು ಅರವಿಂದ್ ನಡುವೆ ಇರುವ ಪ್ರೀತಿ ಸತ್ಯವಾದದ್ದು ಎಂದಿದ್ದಾರೆ. ಇದನ್ನು ನಾನು ಸ್ಕ್ರಿಪ್ಟ್ ಮಾಡಿಲ್ಲ. ಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಒಂದು ಎರಡು ಗಂಟೆ ಸ್ಕ್ರೀಪ್ಟ್ ಮಾಡಬಹುದು. ಆದರೆ, ಇಡೀ ದಿನ ಲವ್ ಸ್ಕ್ರಿಪ್ಟ್ ಮಾಡಲು ಸಾಧ್ಯವೇ. ಆರಂಭದಲ್ಲಿ ಅವರಿಬ್ಬರಿಗೂ ಪರಸ್ಪರ ಪರಿಚಯೂ ಇರಲಿಲ್ಲ. ಇಬ್ಬರು ಬೇರೆ ಬೇರೆ ಕ್ಷೇತ್ರದವರು. ಆದರೆ, ಇಬ್ಬರು ಒಬ್ಬರಿಗೊಬ್ಬರ ಆರೈಕೆ ಮಾಡುವುದನ್ನು ನೋಡಿದರೆ, ಅವರಿಬ್ಬರ ನಡುವೆ ನಿಜವಾದ ಪ್ರೀತಿ ಇದೆ ಎಂಬುದು ತಿಳಿಯುತ್ತದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. (ಏಜೆನ್ಸೀಸ್)