ಬೆಂಗಳೂರು: ಬಿಗ್ಬಾಸ್ ಸೀಸನ್ 8ಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಲ್ಯಾಗ್ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅರವಿಂದರ್ ರನ್ನರ್ ಅಪ್ ಆದರೆ, ದಿವ್ಯಾ ಉರುಡುಗ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಅರವಿಯಾ (ಅರವಿಂದ್ ಮತ್ತು ದಿವ್ಯಾ ಉರುಡುಗ) ಎಂದೇ ಬಿಗ್ಬಾಸ್ ಮನೆಯಲ್ಲಿ ಖ್ಯಾತಿಯಾಗಿರು ಜೋಡಿಯು ರನ್ನರ್ಅಪ್ ಮತ್ತು ಸೆಕೆಂಡ್ ರನ್ನರ್ ಅಪ್ ಸ್ಥಾನ ಪಡೆದಿದ್ದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೂ, ಇಬ್ಬರ ಪ್ರದರ್ಶನ ಬಗ್ಗೆ ಅಭಿಮಾನಿಗಳಿಗೆ ಮೆಚ್ಚುಗೆ ಇದೆ.
ಅರವಿಯಾ ಜೋಡಿಗೆ ತುಂಬಾ ಖ್ಯಾತಿ ಇರುವುದರಿಂದ ಅದರ ಉಪಯೋಗ ಪಡೆದುಕೊಳ್ಳಲು ಕಲರ್ಸ್ ಕನ್ನಡ ಮುಂದಾಗಿದೆ. ಹೌದು, ಇಬ್ಬರ ಕೆಮಿಸ್ಟ್ರಿಯಿಂದ ಒಳ್ಳೆಯ ಟಿಆರ್ಪಿ ಪಡೆಯಬಹುದು ಎಂಬುದು ಕಲರ್ಸ್ ಕನ್ನಡದ ತಂತ್ರವಾಗಿದೆ. ಹೀಗಾಗಿ ಅವರಿಬ್ಬರಿಗೆ ಕಲರ್ಸ್ ಕನ್ನಡ ಬಂಪರ್ ಆಫರ್ ಒಂದನ್ನು ನೀಡಿದೆ.
ಇಬ್ಬರು ಮತ್ತೊಂದು ಶೋನಲ್ಲಿ ಒಟ್ಟಿಗೆ ಕರೆತರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಆ ಕಾರ್ಯಕ್ರಮ ಬೇರೆ ಯಾವುದು ಅಲ್ಲ. ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಜನಮನ್ನಣೆ ಗಳಿಸಿರುವ ರಾಜಾ ರಾಣಿ ಶೋ. ಈ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಅರವಿಯಾ ಜೋಡಿಯನ್ನು ಕರೆತರಲು ಕಲರ್ಸ್ ಕನ್ನಡ ಪ್ಲಾನ್ ಮಾಡಿದೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್)