ಸಿನಿವಾಣಿ

ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿರೋ ಖ್ಯಾತ ನಟಿಯ ವಿಡಿಯೋ ಲೀಕ್: ಟ್ರೋಲಿಗರಿಂದ ಗಂಭೀರ ಆರೋಪ​!

ನವದೆಹಲಿ: ಭೋಜ್​ಪುರಿ ಸಿನಿಮಾ ರಂಗದ ಖ್ಯಾತ ನಟಿ ತ್ರಿಷಾ ಕರ್​ ಮಧು ಅವರು ತಮ್ಮ ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗಿದೆ.

ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿರುವ ವಿಡಿಯೋ ಆಗಿದ್ದು, ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧು, ದೇವರು ಎಲ್ಲವನ್ನು ನೋಡುತ್ತಿದ್ದಾನೆ. ನನ್ನ ಹೆಸರನ್ನು ಕೆಡಿಸಲು ಉದ್ದೇಶಪೂರ್ವಕವಾಗಿಯೇ ಕೆಲವು ಮಂದಿ ವಿಡಿಯೋವನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದಾರೆ. ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆಂದು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ವಿಡಿಯೋ ಹೇಗೆ ಸೋರಿಕೆ ಆಯಿತು ಎಂಬುದರ ಬಗ್ಗೆ ನಟಿ ಸರಿಯಾಗಿ ಸ್ಪಷ್ಟನೆ ನೀಡಿಲ್ಲ. ಇದೇ ಸಂದರ್ಭದಲ್ಲಿ ನೆಟ್ಟಿಗರು ನಟಿ ಮಧು ಅವರತ್ತಲೇ ಬೊಟ್ಟು ಮಾಡಿದ್ದಾರೆ. ವಿಡಿಯೋ ಸೋರಿಕೆ ಹಿಂದಿರುವ ವ್ಯಕ್ತಿ ಅವರೇ ಎಂದಿರುವ ನೆಟ್ಟಿಗರು ಇದೆಲ್ಲ ಪ್ರಚಾರ ಗಿಮಿಕ್​ ಎಂದು ಆರೋಪಿಸಿದ್ದಾರೆ. ಅಲ್ಲದೆ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಕೂಡ ಮಾಡುತ್ತಿದ್ದಾರೆ.

"ಹಮ್ ಹೈ ಹಿಂದುಸ್ತಾನಿ" ಚಿತ್ರದ ಮೂಲಕ ಭೋಜ್‌ಪುರಿ ಧಾರಾವಾಹಿಗೆ ಪಾದಾರ್ಪಣೆ ಮಾಡಿದ ಬಂಗಾಳಿ ನಟಿ ತ್ರಿಶಾ ಕರ್ ಮಧು, ನಂತರ ಹಲವಾರು ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯರಾದರು. (ಏಜೆನ್ಸೀಸ್​)