ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ ಬಹಳ ಕುತೂಹಲವನ್ನು ತೆರೆದಿಟ್ಟಿದೆ. ಶೋ ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇವೆ. ಯಾರು ಗೆಲ್ಲುತ್ತಾರೆಂಬ ಕುತೂಹಲ ಹೆಚ್ಚಾಗಿದೆ. ಎರಡನೇ ಇನ್ನಿಂಗ್ಸ್ ಆರಂಭವಾದ ಬಳಿಕ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ.
ಇನ್ನು ಬಿಗ್ಬಾಸ್ ವೀಕ್ಷಕರ ಪ್ರಕಾರ ಚಕ್ರವರ್ತಿ ಚಂದ್ರಚೂಡ್ ತುಂಬಾ ಕಿರಿಕಿರಿ ಉಂಟುಮಾಡುವ ಸ್ಪರ್ಧಿಯಂತೆ. ಚಂದ್ರಚೂಡ್ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದರು. ಅಂದಿನಿಂದ ಅವರು ಮನೆಯಲ್ಲಿನ ಸ್ಪರ್ಧಿಗಳ ಬಗ್ಗೆ ಸೂಕ್ತವಲ್ಲದ ಪದಗಳನ್ನೇ ಬಳಸುತ್ತಿದ್ದಾರೆ.
ತಾಳ್ಮೆ ಕಳೆದುಕೊಳ್ಳುವುದರಲ್ಲಿ ಚಂದ್ರಚೂಡ್ ನಂಬರ್ ಒನ್ ಅಂತೆ. ಸಣ್ಣ ವಿಚಾರಗಳಿಗೂ ಅವರು ಕೋಪಗೊಳ್ಳುತ್ತಾರೆಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ವಿರುದ್ಧ ವಿವಾದ ಸೃಷ್ಟಿಕೊಂಡಿದ್ದ ಚಂದ್ರಚೂಡ್ ಎರಡನೇ ಇನ್ನಿಂಗ್ಸ್ನಲ್ಲಿ ಪ್ರಿಯಾಂಕ ತಿಮ್ಮೇಶ್ ಬಳಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಈವರೆಗೂ ಚಂದ್ರಚೂಡ್ ಸ್ಪರ್ಧಿಗಳ ಜತೆ ಚರ್ಚೆಗೆ ಧುಮುಕ್ಕಿದ್ದೇ ಹೆಚ್ಚು. ಅಲ್ಲದೆ, ಸಣ್ಣ ವಿಚಾರಕ್ಕೂ ಕೂಗಾಡುತ್ತಾರೆ. ಇದನೆಲ್ಲವನ್ನು ಪರಿಗಣಿಸಿರುವ ಬಿಗ್ಬಾಸ್ ವೀಕ್ಷಕರು ಬಿಬಿಕೆ-8ರ ಅತಿ ಕಿರಿಕಿರಿಯುಂಟು ಮಾಡುವ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಎಂದು ಹೆಸರಿಸಿದ್ದಾರೆ. ನಿಮಗೆ ಏನನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಬಹುದಾಗಿದೆ. (ಏಜೆನ್ಸೀಸ್)