ಬೆಂಗಳೂರು: ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಮಗ ರಾಮು ಕಣಗಾಲ್ ಇಂದು ಮುಂಜಾನೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಮು ಅವರು "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯಶಾಲೆಯನ್ನು ನಡೆಸುತ್ತಿದ್ದರು. ಮದ್ರಾಸ್ನಲ್ಲಿ ಓದಿ ಬೆಳೆದಿದ್ದ ರಾಮು ಅವರು ತಂದೆಯ ಶಿಸ್ತನ್ನು ಮೈಗೂಡಿಸಿಕೊಂಡು ಅನೇಕರಿಗೆ ನೃತ್ಯವನ್ನು ಕಲಿಸಿಕೊಡುವ ಮೂಲಕ ಗೌರವಯುತ ಬದುಕು ಸಾಗಿಸುತ್ತಿದ್ದರು.