ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನ ಒಂದೇ ಒಂದು ಪ್ರಾಯೋಜಿತ ಫೋಸ್ಟ್ಗೆ ಪ್ರಿಯಾಂಕಾ ಚೋಪ್ರಾ ಖಾತೆಗೆ ಬರುವ ಮೊತ್ತವೆಷ್ಟು ಗೊತ್ತೆ? ಬರೋಬ್ಬರಿ ಮೂರು ಕೋಟಿ ರೂಪಾಯಿಗಳನ್ನು ಪ್ರಿಯಾಂಕಾ ತಮ್ಮ ಒಂದು ಪೋಸ್ಟ್ಗೆ ಪಡೆಯುತ್ತಿದ್ದಾರಂತೆ. ಇನ್ಸ್ಟಾಗ್ರಾಂ ಮೂಲಕ ಅತೀ ಹೆಚ್ಚು ಹಣ ಸಂಪಾದಿಸುವವರ ಪಟ್ಟಿ ಬಿಡುಗಡೆಯಾಗಿದ್ದು, ಪ್ರಿಯಾಂಕಾ, 27ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಭರ್ಜರಿ 65 ಮಿಲಿಯನ್ (6.5 ಕೋಟಿ) ಹಿಂಬಾಲಕರನ್ನು ಹೊಂದಿರುವ ಪ್ರಿಯಾಂಕಾ, ತಮ್ಮ ಪ್ರತಿ ಪೋಸ್ಟ್ಗೂ ಅತೀ ಹೆಚ್ಚಿನ ವೀಕ್ಷಣೆಯನ್ನು ಪಡೆಯುತ್ತಾರೆ. ಅದೇ ಕಾರಣಕ್ಕೆ ಪ್ರಯೋಜಕರು ಪ್ರಿಯಾಂಕಾ ಹಿಂದೆ ಬಿದ್ದಿದ್ದು, ತಮ್ಮ ಬ್ರಾಂಡ್ ಪ್ರಮೋಟ್ ಮಾಡುವುದಕ್ಕೆ ಮೂರು ಕೋಟಿ ರೂ.ಗಳವರೆಗೂ ಕೊಡುತ್ತಾರೆ ಎನ್ನುವುದು ವಿಶೇಷ.