ಸೌತ್ನಲ್ಲಿ ಸದ್ಯ ಸಖತ್ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ಅಭಿನಯದ "ಪುಷ್ಪ' ಚಿತ್ರವೂ ಒಂದು. ಈಗಾಗಲೇ ಹಾಡು, ಟೀಸರ್ ಮೂಲಕವೇ ನಿರೀೆ ದುಪ್ಪಟ್ಟು ಮಾಡಿರುವ ಚಿತ್ರತಂಡ, ಇದೀಗ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಲುಕ್ ರಿಲೀಸ್ ಮಾಡಿ, ಅಭಿಮಾನಿಗಳಿಗೆ ಸರ್ಪೆಸ್ ನೀಡಿದೆ.
ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಶೇಷ ೋಟೋವೊಂದನ್ನು ಜಾಲತಾಣದಲ್ಲಿ ಹರಿಬಿಟ್ಟಿರುವ ತಂಡ, ಪುಷ್ಪರಾಜನ ಮನದರಸಿ ಎಂದು ಪರಿಚಯಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಿರುವ ಈ ಚಿತ್ರ ಕ್ರಿಸ್ಮಸ್ಗೆ ಬಿಡುಗಡೆ ಆಗುತ್ತಿದೆ. ಹಾದ್ ಾಸಿಲ್, ಡಾಲಿ ಧನಂಜಯ ಸೇರಿ ಹಲವರು ಈ ಚಿತ್ರದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಚಿತ್ರ ನಿಮಿರ್ಸಿದೆ.