ಸಿನಿವಾಣಿ

PHOTO GALLERY| ಡಾಕ್ಟರ್​ ಜೋಡಿಯ ಪ್ರೀತಿಗೆ ಕರೊನಾವೇ ಸಾಕ್ಷಿ: ನೀವು ನೋಡಿರದ ಫೋಟೋಶೂಟ್​ ಇದು!

ನವದೆಹಲಿ: ಆಸೆ-ಆಂಕಾಕ್ಷೆಗಳ ಮೇಲೆ ಕಾರ್ಮೋಡ ಸರಿಸಿರುವ ಕರೊನಾ ವೈರಸ್ ಜಾಗತಿಕವಾಗಿ ಅನೇಕರನ್ನು ದುಃಖದ ಕಡಲಲ್ಲಿ ಮುಳಗಿಸಿದೆ. ಇಂತಹ ಸಂದರ್ಭದಲ್ಲಿ ಈಜಿಪ್ಟ್​ನ ನವಜೋಡಿಯೊಂದು ತಮ್ಮ ಮದುವೆಯ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಅನ್ನು ಆಸ್ಪತ್ರೆಯಲ್ಲಿಯೇ ಮಾಡುವ ಮೂಲಕ ಜನರಲ್ಲಿ ಆಶಾಭಾವ ಮೂಡಿಸಿದೆ.

ಈಜಿಪ್ಟ್​ನ ವೈದ್ಯರಾಗಿರುವ ಮೊಹಮ್ಮದ್​ ಫಹ್ಮೈ ಮತ್ತು ಅಯಾ ಮೊಸ್ಭಾ ಈಜಿಪ್ಟ್​ನ ಮನ್ಸೌರಾ ನಗರದ ದಾರ್​ ಅಲ್​ ಶಿಫಾ ಆಸ್ಪತ್ರೆಯಲ್ಲಿ ಫೋಟೋಶೂಟ್​ ಜತೆಯಲ್ಲಿ ನಿಶ್ಚಿತಾರ್ಥವನ್ನು ನೆರವೇರಿಸಿಕೊಂಡಿದ್ದಾರೆ. ಮೇ 25ರಂದು ಫೋಟೋಶೂಟ್​ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಜನರಲ್ಲಿ ಆಶಾಭಾವ ಮೂಡಿಸಲು ಆಸ್ಪತ್ರೆಯಲ್ಲೇ ಫೋಟೋಶೂಟ್​ ನಡೆಸಲಾಯಿತು ಎಂದು ಶೂಟ್​ ಮಾಡಿದ ಮೊಹಮ್ಮದ್ ಸಲೀಮ್ ಅವರು ತಿಳಿಸಿದ್ದಾರೆ.

ದುರ್ದೈವದ ಸಂಗತಿಯೆಂದರೆ ಕೆಲ ಕಿಡಿಗೇಡಿಗಳು ಇದೇ ಫೋಟೋಗಳನ್ನು ತಪ್ಪು ಸಂದೇಶ ಹರಡಲು ಬಳಸಿಕೊಂಡಿದ್ದು, ಕರೊನಾ ರೋಗಿಯ ಮೇಲೆ ವೈದ್ಯೆಗೆ ಲವ್​ ಆಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ ಎಂದು ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ.

ಫೋಟೋಗಳ ಮೇಲೆ ಕ್ಲಿಕ್ಕಿಸಿ

ಫೋಟೋ ಕೃಪೆ: ಮೊಹಮ್ಮದ್ ಸಲೀಮ್​ ಫೋಟೋಗ್ರಫಿ 