ಸಿನಿವಾಣಿ

ಒಂದೇ ಚಿತ್ರದಲ್ಲಿ ಪ್ರಮೋದ್-ಪೃಥ್ವಿ; ಮಾರ್ಚ್​ನಲ್ಲಿ ಆರಂಭ...

ಬೆಂಗಳೂರು: ‘ಪ್ರೀಮಿಯರ್ ಪದ್ಮಿನಿ’ ನಂತರ ಪ್ರಮೋದ್​ಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ‘ದಿಯಾ’ ನಂತರ ಪೃಥ್ವಿ ಅಂಬರ್​ದೂ ಅದೇ ಸ್ಥಿತಿ. ಈಗಾಗಲೇ ಇಬ್ಬರ ಕೈಯಲ್ಲೂ ಒಂದಿಷ್ಟು ಚಿತ್ರಗಳಿದ್ದು, ನಟನೆಯಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ, ಇಬ್ಬರನ್ನೂ ಒಂದೇ ಚಿತ್ರದಲ್ಲಿ ಸೇರಿಸುವ ಪ್ರಯತ್ನ ಇದೀಗ ಚಂದನವನದಲ್ಲಿ ಆಗುತ್ತಿದೆ. ಅಂಥದ್ದೊಂದು ಪ್ರಯತ್ನ ಮಾಡುತ್ತಿರುವುದು ಗಿರೀಶ್ ಮೂಲಿಮನಿ.

ಈ ಹಿಂದೆ ನಿರಂಜನ್ ಶೆಟ್ಟಿ ಅಭಿನಯದ ‘ರಾಜರು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್, ಇದೀಗ ಪ್ರಮೋದ್ ಮತ್ತು ಪೃಥ್ವಿಯನ್ನು ಸೇರಿಸಿ ಹೊಸ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎಸ್​ವಿಸಿ ಫಿಲಂಸ್​ನಡಿ ಎಂ. ಮುನೇಗೌಡ ನಿರ್ವಿುಸುತ್ತಿದ್ದಾರೆ. ಇದು ಅವರಿಗೆ ಮೊದಲ ಚಿತ್ರ.

ಈ ಹೆಸರಿಡದ ಚಿತ್ರ ಮಾರ್ಚ್​ನಲ್ಲಿ ಪ್ರಾರಂಭವಾಗಲಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಮಲೆನಾಡು ಮತ್ತು ಬಯಲು ಸೀಮೆಯ ಹಲವು ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತದಂತೆ.