ಬೆಂಗಳೂರು: ಇತ್ತೀಚೆಗಷ್ಟೇ ಶಿವರಾಜಕುಮಾರ್ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ವಿುಸುವುದಾಗಿ ಹಿರಿಯ ನಿರ್ವಪಕ ಸಂದೇಶ್ ನಾಗರಾಜ್ ಘೋಷಿಸಿದ್ದರು. ಈಗ ಅವರದ್ದೇ ಸಂದೇಶ್ ಪ್ರೊಡಕ್ಷನ್ಸ್ನಿಂದ ಇನ್ನೊಂದು ಚಿತ್ರ ಘೋಷಣೆಯಾಗಿದೆ. ಈ ಬಾರಿ ಪ್ರಭುದೇವ ಅಭಿನಯದಲ್ಲಿ ಐದು ಭಾಷೆಗಳಲ್ಲಿ ಚಿತ್ರ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ಸದ್ಯದಲ್ಲೇ ಈ ಚಿತ್ರದ ಕಲಾವಿದರು ಮತ್ತು ತಾಂತ್ರಿಕವರ್ಗದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಶಿವರಾಜಕುಮಾರ್ ಮತ್ತು ಪ್ರಭುದೇವ ಅಭಿನಯದ ಚಿತ್ರವೊಂದನ್ನು ಯೋಗರಾಜ್ ಭಟ್ ಘೋಷಿಸಿದ್ದರು. ಆದರೆ, ಆ ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ. ಈ ಮಧ್ಯೆ, ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪ್ರಭುದೇವ, ಪುನೀತ್ ರಾಜಕುಮಾರ್ ಜತೆಗೆ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಚಿತ್ರವು ‘ಜೇಮ್್ಸ’ನ ನಂತರ, ಪುನೀತ್ ಅಭಿನಯದ ಕೊನೆಯ ಚಿತ್ರವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.