ಸಿನಿವಾಣಿ

We Miss You Appu ಎಂದು ಭಾವುಕರಾದ ಡಾರ್ಲಿಂಗ್ ಪ್ರಭಾಸ್! 'ಜೇಮ್ಸ್' ಟೀಸರ್ ಕಂಡು ಬಾಹುಬಲಿ ಹೇಳಿದ್ದೇನು?

ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಟೀಸರ್ ರಿಲೀಸ್ ಆಗಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 'ಜೇಮ್ಸ್' ಟೀಸರ್ ದಾಖಲೆಗಳನ್ನು ಬರೆಯ ತೊಡಗಿದೆ. ಮತ್ತೊಂದೆಡೆ, ನಟ ಪುನೀತ್ ಅಭಿಮಾನಿಗಳು ಅವರ ಈ 'ಜೇಮ್ಸ್' ಟೀಸರ್ ನೋಡಿ ಭಾವುಕರಾಗಿದ್ದಾರೆ. ಕೇವಲ ಅಭಿಮಾನಿಗಳು ಅಲ್ಲದೇ, ಅಪ್ಪು ಅವರ ಆಪ್ತರು, ಸ್ನೇಹಿತರು, ಇತರ ಸೆಲೆಬ್ರಿಟಿಗಳು ಕೂಡಾ ಭಾವುಕರಾಗಿದ್ದಾರೆ. ಸದ್ಯ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಪ್ರಭಾಸ್ ಅವರು ಕೂಡಾ 'ಜೇಮ್ಸ್' ಟೀಸರ್ ನೋಡಿ ಜೊತೆಗೆ ಈ ಟೀಸರ್ ಅನ್ನು ತಮ್ಮ ಇನ್​ಸ್ಟಾಗ್ರಾಂಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. 7.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಭಾಸ್ ಅವರ ಈ ಪೋಸ್ಟ್ ಗೆ 5 ಲಕ್ಷ ಲೈಕ್ಸ್ ಬಂದಿವೆ.
ಹೌದು, ಡಾರ್ಲಿಂಗ್ ಪ್ರಭಾಸ್ ಅವರು ಅಪ್ಪು ಅಭಿನಯದ 'ಜೇಮ್ಸ್' ಟೀಸರ್ ನೋಡಿ ಸಖತ್ ಥ್ರಿಲ್ ಆಗಿದ್ದಾರೆ. ಜತೆಗೆ, ಭಾವುಕರಾದ ಪ್ರಭಾಸ್ 'ಜೇಮ್ಸ್' ಟೀಸರ್ ಅನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಟೀಸರ್ ಕುರಿತು ಅವರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. "ಜೇಮ್ಸ್' ಸಿನಿಮಾ ಒಂದು 'ಮಾಸ್ಟರ್ ಪೀಸ್' ಆಗಲು ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂಬುದು ನನಗೆ ಖಾತ್ರಿಯಾಗಿದೆ. ಅಪ್ಪು ಸರ್ ಅವರನ್ನು ಇಷ್ಟಪಡುವ ಲಕ್ಷಾಂತರ ಜನರಿಗೆ ಈ ಚಿತ್ರ ಯಾವಾಗಲೂ ವಿಶೇಷವಾಗಿರುತ್ತದೆ. We Miss You Appu." ಎಂಬ ಕ್ಯಾಪ್ಷನ್ ತಮ್ಮ ಪೋಸ್ಟ್​ಗೆ ಕೊಟ್ಟಿದ್ದಾರೆ. ಪ್ರಭಾಸ್ ಅವರ ಈ ಮಾತುಗಳು ಬಹುತೇಕ ಎಲ್ಲರೂ, ಅದರಲ್ಲಿಯೂ ಅಪ್ಪು ಅಭಿಮಾನಿಗಳ ಮನಸ್ಸು ಕದ್ದಿದೆ ಎನ್ನುವುದರಲ್ಲಿ ತಪ್ಪಿಲ್ಲ.