ಸಿನಿವಾಣಿ

ಲೂಸಿಫರ್​ ಸಿನಿಮಾ ರಿಮೇಕ್​ನಲ್ಲಿ ಚಿರಂಜೀವಿ; ಸೈರಾದಂತೆ ಕನ್ನಡದಲ್ಲೂ ಬರುತ್ತಾ ಈ ಸಿನಿಮಾ; ಸಾಹೋ ನಿರ್ದೇಶಕರಿಂದ ನಡೆದಿದೆ ಹೀಗೊಂದು ಪ್ರಯತ್ನ!!

ಮಾಲಿವುಡ್​ನಲ್ಲಿ ಬಿಡುಗಡೆಯಾಗಿ ಕಡಿಮೆ ಸಮಯದಲ್ಲಿ ನೂರು ಕೋಟಿ ಗಳಿಸಿ ದಾಖಲೆ ಬರೆದ ‘ಲೂಸಿಫರ್​’ ಸಿನಿಮಾ ಈಗ ತೆಲುಗಿನಲ್ಲೂ ಬರುವ ಸಾಧ್ಯತೆಗಳಿವೆ. ಹಾಗಾದರೆ ತೆಲುಗಿನಲ್ಲಿ ಹೀರೋ ಯಾರು? ಅದಕ್ಕೆ ಮೆಗಾಸ್ಟಾರ್​ ಚಿರಂಜೀವಿ ಹೆಸರು ಕೇಳಿಬರುತ್ತಿದೆ. ಹೌದು, ಹೀಗೊಂದು ಪ್ರಯತ್ನಕ್ಕೆ ಕೈ ಹಾಕು ಎಂದು ನಟ ಪ್ರಭಾಸ್​ ಕಡೆಯಿಂದ ನಿದೇರ್ಶಕರಿಗೆ ಬಂದಿದೆಯಂತೆ. ಅಂದರೆ, ಸಾಹೋ ಸಿನಿಮಾ ನಿರ್ದೇಶಕ ಸೂಜಿತ್​ಗೆ ಲೂಸಿಫರ್​ ಸಿನಿಮಾ ರಿಮೇಕ್​ ಮಾಡು ಎಂದು ಹೇಳಿದ್ದು ಇದೇ ಪ್ರಭಾಸ್​. ಅಷ್ಟೇ ಅಲ್ಲ ಮೋಹನ್​ಲಾಲ್​ ಮಾಡಿದ ಪಾತ್ರ ಮೆಗಾಸ್ಟಾರ್​ಗೆ ಹೊಂದಾಣಿಕೆ ಆಗುತ್ತದೆ. ಹಾಗಾಗಿ ಆದಷ್ಟು ಬೇಗ ರಾಮ್​ಚರಣ್​ರನ್ನು ಭೇಟಿಯಾಗಿ ಸಿನಿಮಾ ಬಗ್ಗೆ ಮಾತನಾಡುವಂತೆ ಹೇಳಿದ್ದಾರೆ. ಒಂದು ವೇಳೆ ಈ ಸಿನಿಮಾ ಒಪ್ಪಿಕೊಂಡಿದ್ದೇ ಆದರೆ, ತೆಲುಗಿನ ಜತೆಯಲ್ಲಿ ತಮಿಳು ಮತ್ತು ತೆಲುಗಿನಲ್ಲೂ ಸಿನಿಮಾ ಬರುವ ಸಾಧ್ಯತೆ ಇದೆ.
ಇನ್ನು ಈಗಾಗಲೇ ಹೊಸ ಸಿನಿಮಾವೊಂದರ ಸ್ಕ್ರಿಪ್ಟ್​ ಮೇಲೆ ಸೂಜಿತ್​ ಕೆಲಸ ಮಾಡುತ್ತಿದ್ದು, ಸ್ವತಃ ರಾಮಚರಣ್​ ಆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇತ್ತ ಚಿರಂಜೀವಿ ಕೊರಡಾಲ ಶಿವ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಆಚಾರ್ಯ ಸಿನಿಮಾದಲ್ಲಿ ಬಿಜಿಯಾಗಿದ್ದು, ಎಲ್ಲ ಅಂದುಕೊಂಡಂತೆ ಆದರೆ ಆಚಾರ್ಯ ಮುಗಿದ ಬಳಿಕ ಲೂಸಿಫರ್​ ಸಿನಿಮಾ ಶುರುವಾಗಲಿದೆ. (ಏಜೆನ್ಸೀಸ್​)