ಈಗಾಗಲೇ ರಾಧೆ ಶ್ಯಾಮ್ ಸೇರಿ ದೀಪಿಕಾ ಪಡುಕೋಣೆ ಜತೆಗೆ ಸಿನಿಮಾ ಮಾಡುವ ಬಗ್ಗಿ ಅಧಿಕೃತವಾಗಿ ಹೇಳಿಕೊಂಡಿರುವ ಪ್ರಭಾಸ್, ಸದ್ದಿಲ್ಲದೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಚಿತ್ರದ ಶೀರ್ಷಿಕೆಯನ್ನೂ ರಿವೀಲ್ ಮಾಡಿದ್ದಾರೆ. ಚಿತ್ರದ ಹೆಸರು ‘ಆದಿಪುರುಷ್’
ಇದನ್ನೂ ಓದಿ: ಕನ್ನಡಕ್ಕೆ ಕರಾವಳಿ ಚೆಲುವೆ ಅನುಷ್ಕಾ
ಬಾಲಿವುಡ್ ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಟಿ ಸಿರೀಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ತಾನಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರ ನಿರ್ದೇಶನ ಮಾಡಿದ್ದ ಓಂ ರಾವತ್, ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸೋಮವಾರ ರಾತ್ರಿ ವಿಶೇಷ ಘೋಷಣೆ ಇದೆ ಎಂದು ಹಿಂಟ್ ಕೊಟ್ಟಿದ್ದ ನಟ ಪ್ರಭಾಸ್ ಮತ್ತು ಚಿತ್ರತಂಡ, ಮಂಗಳವಾರ ಬೆಳಗ್ಗೆ 7.11ಕ್ಕೆ ಆದಿಪುರುಷ್ ಚಿತ್ರ ಕೈಗೆತ್ತಿಕೊಂಡ ಬಗ್ಗೆ ಹೇಳಿಕೊಂಡಿದೆ.
ಹಿಂದಿ ಮತ್ತು ತೆಲುಗಿನಲ್ಲಿ 3ಡಿಯಲ್ಲಿ ಮೂಡಿಬರಲಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ ಸೇರಿ ಹಲವು ವಿದೇಶಿ ಭಾಷೆಗೂ ಈ ಚಿತ್ರ ಡಬ್ ಆಗಲಿದೆ. 2021ಕ್ಕೆ ಸೆಟ್ಟೇರಲಿರುವ ಈ ಚಿತ್ರ 2022ಕ್ಕೆ ಬಿಡುಗಡೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ. (ಏಜೆನ್ಸೀಸ್)