ಹೈದರಾಬಾದ್: ಅತಿ ವೇಗದ ಚಾಲನೆ ಮಾಡುವ ಮೂಲಕ ನಟ ಪ್ರಭಾಸ್ ಈಗ ಭಾರೀ ಟೀಕೆಗೊಳಗಾಗಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಕೆ ಸಿನಿಮಾ ಸೆಟ್ನಿಂದ ತನ್ನ ಲ್ಯಾಂಬೊರ್ಗಿನಿ ಕಾರಿನಲ್ಲಿ ತಾವೇ ಚಾಲನೆ ಮಾಡಿ ಹೊರಟ ಪ್ರಭಾಸ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.
ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ಬಳಿಕ ಸೆಟ್ನಿಂದ ಪ್ರಭಾಸ್ ತೆರಳಿದ್ದು ತನ್ನ ಲ್ಯಾಂಬೊರ್ಗಿನಿ ಕಾರಿನ ಮೂಲಕ, ಆದರೆ ಶರವೇಗದಲ್ಲಿ ಚಾಲನೆ ಮಾಡಿ ಹೊರಟಿರುವ ದೃಶ್ಯ ಭಾರೀ ವೈರಲ್ ಆಗುತ್ತಿದೆ.
ಕೆಲವರು ಚಾಲನೆ ನಿಧಾನವಾಗಿ ಮಾಡಿ, ನಿಮ್ಮ ಮೇಲೆ ನಿರ್ಮಾಪಕರು 2000 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದಿದ್ದಾರೆ. ಇನ್ನೂ ಸ್ಪೋರ್ಟ್ ಕಾರಿನಂತಿರುವುದರಿಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿರಬಹುದು ಎಂದೂ ಕೆಲವರು ಹಾಸ್ಯ ಮಾಡಿದ್ದಾರೆ.
ಏನೇ ಆದರೂ ಬಾಹುಬಲಿ ಪ್ರಭಾಸ್ ಇಷ್ಟು ವೇಗದ ಚಾಲನೆ ಒಳ್ಳೆದಲ್ಲ ಎಂದೂ ಕೆಲವರು ತನ್ನ ನೆಚ್ಚಿನ ನಟನಿಗೆ ಸಲಹೆ ನೀಡಿದ್ದಾರೆ. ಕಳೆದ ವರ್ಷವೇ ಈ ಕಾರನ್ನು ಪ್ರಭಾಸ್ ಖರೀದಿಸಿದ್ದರು. (ಏಜೆನ್ಸೀಸ್)