ಸಿನಿವಾಣಿ

ಐಷಾರಾಮಿ ಕಾರಿನ ಒಡೆಯನಾದ ಪ್ರಭಾಸ್​: ಇದರ ಬೆಲೆ ಕೇಳಿದ್ರೆ ಹುಬ್ಬೇರುವುದು ಖಚಿತ!

ಹೈದರಾಬಾದ್​: ಬಾಹುಬಲಿ ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್​ ಆಗಿರುವ ನಟ ಪ್ರಭಾಸ್​ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಕನಸಿನ ಕಾರನ್ನು ಪ್ರಭಾಸ್​ ಅವರು ಅದ್ಧೂರಿಯಾಗಿ ಆಹ್ವಾನ ಮಾಡಿದ್ದಾರೆ.

ಪ್ರಭಾಸ್​, ನ್ಯೂ ಲ್ಯಾಂಬೋರ್ಗಿನಿ ಅವೆಂಟಡರ್​ ಎಸ್​ ಹೆಸರಿನ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಅದರ ಬೆಲೆ ಎಷ್ಟಿರಬಹುದೆಂದು ಗೆಸ್​ ಮಾಡ್ತೀರಾ? ಅಂದಾಜು ಸಿಗುತ್ತಿಲ್ಲವಾ? ಹಾಗಾದ್ರೆ ನಾವೇ ಅದರ ಬೆಲೆ ಎಷ್ಟು ಅಂತಾ ಹೇಳ್ತೀವಿ ಮುಂದೆ ಓದಿ..

ಅಂದಹಾಗೆ ಹೊಸ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್​ ಕಾರಿನದ್ದೇ ಸದ್ದಾಗಿದೆ. ಅಲ್ಲದೆ, ನಿಧಾನವಾಗಿ ಕಾರು ಓಡಿಸಿ ಎಂದು ನೆಚ್ಚಿನ ನಟನಿಗೆ ಅಭಿಮಾನಿಗಳ ಜಾಲತಾಣ ಮೂಲಕವೇ ಮನವಿ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಕಾಮೆಂಟ್​ಗಳು ವ್ಯಕ್ತವಾಗಿವೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಹುನಿರೀಕ್ಷಿತ ರಾಧೆಶ್ಯಾಮ್​ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 30 2021ಕ್ಕೆ ತೆರೆಗೆ ಬರಲಿದೆ. ಇದರೊಂದಿಗೆ ಸಲಾರ್​ ಚಿತ್ರದಲ್ಲೂ ಪ್ರಭಾಸ್​ ನಟಿಸಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)