ಪ್ರಭಾಸ್ ನಾಯಕನಾಗಿ ನಟಿಸಲಿರುವ ‘ಆದಿಪುರುಷ್’ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ, ಸಿನಿಮಾ ಘೋಷಣೆ ಆದಾಗಿನಿಂದ ಕಾಡುತ್ತಲೇ ಇದೆ. ಸಾಕಷ್ಟು ನಟಿಯರ ಹೆಸರುಗಳು ಕೇಳಿಬಂದಿತ್ತಾದರೂ, ಅಧಿಕೃತವಾಗಿರಲಿಲ್ಲ. ಇದೀಗ ನಟಿ ಕೃತಿ ಸನೋನ್ ಪ್ರಭಾಸ್ಗೆ ಜೋಡಿಯಾಗಲಿದ್ದಾರೆ ಎಂಬ ಮಾತು ಬಿಟೌನ್ ಅಂಗಳದಿಂದ ಕೇಳಿಬರುತ್ತಿದೆ.
ಈ ಮೊದಲು ಅನುಷ್ಕಾ ಶರ್ಮಾ ನಾಯಕಿ ಎನ್ನಲಾಗಿತ್ತು. ಅದಾದ ಬಳಿಕ ಕಿಯಾರಾ ಅಡ್ವಾಣಿ ಮತ್ತು ಶ್ರದ್ಧಾ ಕಪೂರ್ ಸಹ ಸರತಿಯಲ್ಲಿದ್ದರು. ಇದೀಗ ಚಿತ್ರದ ನಿರ್ವಪಕರು ಕೃತಿಯನ್ನು ಆಯ್ದುಕೊಂಡಿದ್ದಾರೆ ಎನ್ನಲಾಗಿದೆ. ಬಹುಭಾಷೆಯಲ್ಲಿ ನಿರ್ವಣವಾಗಲಿರುವ ಈ ಚಿತ್ರವನ್ನು ಓಂ ರಾವತ್ ನಿರ್ದೇಶನ ಮಾಡಲಿದ್ದಾರೆ.