ಬೆಂಗಳೂರು: ಪುನೀತ್ ರಾಜಕುಮಾರ್ ನಿರ್ಮಾಣದ ‘ಲಾ’ ಚಿತ್ರವು ಇದೇ ತಿಂಗಳ 17ರಂದು ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ರಾಗಿಣಿ ಈ ಹಿಂದೆ ಕೆಲವು ಜಾಹೀರಾತುಗಳಲ್ಲಿ ಮತ್ತು ರಚಿತಾ ರಾಮ್ ನಿರ್ವಣದ ‘ರಿಷಭ ಪ್ರಿಯ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಈಗ ‘ಲಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಗಿಣಿಗೆ ರೊಮ್ಯಾಂಟಿಕ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುವುದು ಇಷ್ಟವಿರಲಿಲ್ಲವಂತೆ. ‘ನಾನು ಒಂದು ಚಾಲೆಂಜಿಂಗ್ ಪಾತ್ರದ ನಿರೀಕ್ಷೆಯಲ್ಲಿದ್ದೆ. ಒಳ್ಳೆಯ ಚಿತ್ರಕಥೆಗಾಗಿ ಕಾಯುತ್ತಿದ್ದೆ. ಅವೆರಡೂ ನನಗೆ ‘ಲಾ’ ಚಿತ್ರದ ಮೂಲಕ ಸಿಕ್ಕಿತು. ನಿರ್ದೇಶಕ ರಘು ಸಮರ್ಥ್ ಚಿತ್ರದ ಕಥೆ ಹೇಳಿದರು. ಸ್ಕ್ರಿಪ್ಟ್ ಇಷ್ಟವಾಗಿದ್ದಕ್ಕೆ ಒಪ್ಪಿಕೊಂಡು ಅಭಿನಯಿಸಿದ್ದಾಗಿ’ ಅವರು ಹೇಳುತ್ತಾರೆ.
‘ಲಾ ಚಿತ್ರದಲ್ಲಿ ರಾಗಿಣಿ ಜತೆಗೆ ಅಚ್ಯುತ್ ಕುಮಾರ್, ಸುಧಾರಾಣಿ, ಅವಿನಾಶ್, ಮುಖ್ಯಮಂತ್ರಿ ಚಂದ್ರು ಮುಂತಾದವರು ಅಭಿನಯಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ. ಗೋವಿಂದ ನಿರ್ವಿುಸಿರುವ ಈ ಚಿತ್ರವು, ಚಿತ್ರಮಂದಿರಗಳಿಗಿಂಥ ಮುನ್ನ ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.