ಸಿನಿವಾಣಿ

‘ಜುಗಾರಿ ಕ್ರಾಸ್’ನಲ್ಲಿ ರಾಜ್ ಬಿ. ಶೆಟ್ಟಿ : ಗುರುದತ್ ಗಾಣಿಗ ನಿರ್ದೇಶನದಲ್ಲಿ ಸಿನಿಮಾ ಆಗಲಿದೆ ಪೂಚಂತೇ ಕಾದಂಬರಿ

ಬೆಂಗಳೂರು: ಕನ್ನಡದ ದಿಗ್ಗಜ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಜುಗಾರಿ ಕ್ರಾಸ್’ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತರುತ್ತಿರುವ ಮಾಹಿತಿ ಗೊತ್ತೇ ಇದೆ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಈ ಜನಪ್ರಿಯ ಕಾದಂಬರಿಯನ್ನು ತೆರೆ ಮೇಲೆ ತರುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಕಳೆದ ಸೆ. 8ರಂದು ಸಿನಿಮಾ ೋಷಿಸಿದ್ದ ಗುರುದತ್ ಇದೀಗ ಚಿತ್ರದ ಬಗ್ಗೆ ಮತ್ತೊಂದು ಮಹತ್ವದ ಅಪ್‌ಡೇಟ್ ನೀಡಿದ್ದು, ‘ಜುಗಾರಿ ಕ್ರಾಸ್’ನಲ್ಲಿ ನಟ ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಟೀಸರ್‌ನಲ್ಲಿ ತಲೆಬುರಡೆ, ಹರಿಯುತ್ತಿರುವ ರಕ್ತ ಹಾಗೂ ಕೆಂಪು ರತ್ನದ ಜತೆಗೆ ಕೌತುಕ ಹುಟ್ಟಿಸುವ ಹಿನ್ನೆಲೆ ಸಂಗೀತ ಕಾಣಬಹುದು. ಚಿತ್ರತಂಡ ಶೀಘ್ರವೇ ಶೂಟಿಂಗ್ ಆರಂಭಿಸಲಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತದಲ್ಲಿ ‘ಜುಗಾರಿ ಕ್ರಾಸ್’ ಮೂಡಿಬರಲಿದೆ. ಉಳಿದಂತೆ ಕಲಾಬಳಗದ ಮಾಹಿತಿ ಸದ್ಯದಲ್ಲೇ ತಂಡ ನೀಡಲಿದೆ. ಇನ್ನು, ಗುರುದತ್ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಾಯಕನಾಗಿರುವ ‘ಕರಾವಳಿ’ ಚಿತ್ರೀಕರಣ ಪೂರ್ಣಗೊಳಿಸಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ‘ಮಾವೀರ’ ಪಾತ್ರದಲ್ಲಿದ್ದಾರೆ. ಇನ್ನು ಈ ಸಿನಿಮಾ ತೆರೆ ಮೇಲೆ ಬರುವ ಮುನ್ನವೇ ಈ ಜೋಡಿ ‘ಜುಗಾರಿ ಕ್ರಾಸ್’ ಮೂಲಕ ಮತ್ತೊಮ್ಮೆ ಒಂದಾಗಿದೆ.

ಪರದೆ ಮೇಲೆ ತೇಜಸ್ವಿಯ 6ನೇ ಕೃತಿ: ಲೇಖಕ ಪೂರ್ಣಚಂದ್ರ ತೇಜಸ್ವಿ ಕಥೆ, ಕಾದಂಬರಿ ಸೇರಿ ಅವರ ಬರಹಗಳಿಗೆ ಹೆಚ್ಚಿನ ಓದುಗರಿದ್ದಾರೆ. ಹಾಗೆಯೇ ಅವರ ಕೆಲ ಕೃತಿಗಳು ಈಗಾಗಲೇ ಸಿನಿಮಾ ರೂಪ ಪಡೆದು ಬೆಳ್ಳಿಪರದೆ ಮೇಲೆ ಬಂದಿವೆ. ‘ಅಬಚೂರಿನ ಪೋಸ್ಟ್ ಆಫೀಸ್’, ‘ತಬರನ ಕಥೆ’, ‘ಕುಬಿ ಮತ್ತು ಇಯಲ’, ‘ಕಿರಗೂರಿನ ಗಯ್ಯಳಿಗಳು’ ಹಾಗೂ ‘ಡೇರ್ ಡೇವಿಲ್ ಮುಸ್ತಾಾ’ ಕೃತಿಗಳು ಈಗಾಗಲೇ ಸಿನಿಮಾಗಳಾಗಿವೆ. ಇದೀಗ ಅವರ ಜನಪ್ರಿಯ ಕಾದಂಬರಿ ‘ಜುಗಾರಿ ಕ್ರಾಸ್’ ಚಿತ್ರವಾಗುತ್ತಿರುವ ಆರನೇ ಕೃತಿ ಎಂಬುದು ವಿಶೇಷ.