- ಜನ ನಾಯಗನ್ ಶೂಟಿಂಗ್ ಸೆಟ್ನಲ್ಲಿ ಭವಿಷ್ಯಾ ನುಡಿದ್ದಿದ್ದ ನಟಿ ಪೂಜಾ ಹೆಗ್ಡೆ
- ಮುಂದಿನ ಚುನಾವಣೆಯಲ್ಲಿ ಗೆಲ್ಲೋದ್ಯಾರು ಎನ್ನುವುದಕ್ಕೆ ವಿಜಯ್ ಎಂದಿದ್ದ ನಟಿ
- ನನ್ನ ಗೆಸ್ ನಿಜಯವಾಯಯ್ತು ಕನಸುಗಳು ನನಸಾಗುತ್ತದೆ ಎಂದ ನಟಿ
Pooja Hegde: ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ತಮಿಳಿಗ ವೆಟ್ರಿ ಕಳಗಂ ಸಿನಿಮಾವು ಭರ್ಜರಿ ಜಯವನ್ನು ಕಂಡಿದೆ. ಈ ಮಧ್ಯೆ ಜನ ನಾಯಗನ್ ಶೂಟಿಂಗ್ ವೇಳೆ ಪೂಜಾ ಹೆಗ್ಡೆ ಅವರು ವಿಜಯ್ ಜೊತೆ ಚಿತ್ರೀಕರಿಸಿದ್ದ ಮೋಜಿನ ವಿಡಿಯೋವೊಂದು ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ವಿಜಯ್ ಅವರ ಟಿವಿಕೆ ಪಕ್ಷವು ಭರ್ಜರಿ ಗೆಲುವು ಕಂಡ ನಂತರ ನಟಿ ಪೂಜಾ ಹೆಗ್ಡೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಾನು ಮೊದಲೇ ಗೆಸ್ ಮಾಡಿದ್ದೆ ಎನಿಸುತ್ತದೆ. ಈ ಬಾರಿ ಚುನಾವಣೆಯಲ್ಲಿ ವಿಜಯ್ ಗೆಲುವು ಕಾಣುತ್ತಾರೆ ಎನ್ನುವುದನ್ನು. ಕನಸುಗಳು ನನಸಾಗುತ್ತದೆ ಅಭಿನಂದನೆ ವಿಜಯ್ ಸರ್ ಎಂದು ನಟಿ ಪೂಜಾ ಹೆಗ್ಡೆ ಶೀರ್ಷಿಕೆ ಕೊಟ್ಟಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಮೊದಲು ವೈಟ್ ಬೋರ್ಡ್ ಮೇಲೆ ಕೈ ಮುಚ್ಚಿ ಹಿಡಿಯುವ ಪೂಜಾ ಹೆಗ್ಡೆ ನಂತರ, ಕೈ ತೆಗೆಯುತ್ತಾರೆ. ಅದರ ಮೇಲೆ ಮುಂದಿನ ಎಲೆಕ್ಷನ್ನಲ್ಲಿ ಗೆಲ್ಲೋದು ಯಾರು ಎಂದಿತ್ತು. ನಂತರ ಅವರು ಅಲ್ಲೇ ನಿಂತಿದ್ದ ವಿಜಯ್ ವಿನ್ ಆಗೋದು ಎಂದು ಸನ್ನೆ ಮಾಡಿ ತೋರಿಸುತ್ತಾರೆ. ಆಗ ವಿಜಯ್ ನಾಚಿ ನೀರಾಗಿ ಮುಂದೆ ಸಾಗುತ್ತಾರೆ.
ಎಕ್ಸ್ ಪೋಸ್ಟ್ನಲ್ಲಿ ಏನಿದೆ?
ಮತ್ತೊಂದು ಪೋಸ್ಟ್ನಲ್ಲಿ ಓ ಮೈ ಗಾಡ್, ಅಭಿನಂದನೆ ವಿಜಯ್ ಸರ್. ಈಗ ಪಾರ್ಟಿ ಮಾಡುವ ಸಮಯ. ದಳಪತಿ ಕಚೇರಿ ಈಗ ದೊಡ್ಡಾದಾಗುತ್ತಿದೆ ಎಂದು ಬರೆದುಕೊಂಡು ಜನನಾಯಗನ್ ಸಿನಿಮಾ ಶೂಟಿಂಗ್ ವೇಳೆ ತೆಗೆದುಕೊಂಡ ಪಟವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಮ್ಮಂತೆ ಪೂಜಾ ಹೆಗ್ಡೆಯವರಿಗೂ ಸಹ ಭವಿಷ್ಯ ಹೇಳೋಕೆ ಬರುತ್ತದೆ ಎಂದು ಅಭಿಮಾನಿಗಳು ಕಿಚಾಯಿಸಿದ್ದಾರೆ. ಹಲವರು ಒಳ್ಳೆಯ ನಟಿ ಎಂದು ಕಾಮೆಂಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ 234 ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆಯು ಸ್ಥಾನಗಳನ್ನು ಪಡೆದುಕೊಂಡಿದೆ. ಘಟಾನುಘಟಿ ಪಕ್ಷವಾದ ಡಿಎಂಕೆ ಮತ್ತು ಎಐಎಡಿಎಂಕೆ ಕೋಟೆಯನ್ನು ಹೊಡೆದುರುಳಿಸಿದೆ. ಆದರೆ, ಸರ್ಕಾರ ರಚನೆ ಮಾಡಲು 118 ಸ್ಥಾನಗಳ ಬಹುಮತದ ಕೊರತೆ ಇರುವ ಕಾರಣ ಮೈತ್ರಿ ಕಾರ್ಯಾಚರಣೆ ನಡೆಯುತ್ತಿದೆ. ವಿಜಯ್ ಅವರು ಈಗಾಗಲೇ ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.
ಇನ್ನು ಮೊದಲ ಬಾರಿ ಚುನಾವಣೆಯಲ್ಲಿ ನಿಂತು ಗೆದ್ದ ವಿಜಯ್ ಅವರಿಗೆ ರಜನಿಕಾಂತ್, ಕಮಲ್ ಹಾಸನ್, ರಶ್ಮಿಕಾ ಮಂದಣ್ಣ ಮತ್ತು ಎ.ಆರ್. ರೆಹಮಾನ್, ಶಿವರಾಜ್ ಕುಮಾರ್, ವಿಕ್ರಮ ಸೇರಿದಂತೆ ಹಲವು ಗಣ್ಯರು ಹಾಗೂ ರಾಜಕೀಯ ನಾಯಕರು ಅಭಿನಂದಿಸಿದರು, (ಏಜೆನ್ಸೀಸ್).