ಸಿನಿವಾಣಿ

ಅಲ್ಲು ಅರ್ಜುನ್ ಮಗಳ ಜೊತೆ ಕುಣಿದ ಪೂಜಾ ಹೆಗ್ಡೆ! ಯಾವ ಹಾಡು ಗೊತ್ತಾ? ವಿಡಿಯೋ ವೈರಲ್...

ಇತ್ತೀಚೆಗೆ, ಸೌತ್ ನಟಿ ಪೂಜಾ ಹೆಗ್ಡೆ ಸಾಮಾಜಿಕ ಮಾಧ್ಯಮದಲ್ಲಿ ನಟ ಅಲ್ಲು ಅರ್ಜುನ್ ಅವರ ಮುದ್ದಾದ ಮಗಳು ಅಲ್ಲು ಅರ್ಹಾ ಅವರೊಂದಿಗೆ ಕುಣಿದಿರುವ ಒಂದು ಥ್ರೋಬ್ಯಾಕ್ ವಿಡಿಯೋವನ್ನು 'ಅಲಾ ವೈಕುಂಠಪುರಮುಲೋ' ಚಿತ್ರ ಬಿಡುಗಡೆಯಾಗಿ 2 ವರ್ಷಗಳು ಕಳೆದಿರುವ ಸಂದರ್ಭವಾಗಿ ಹಂಚಿಕೊಂಡಿದ್ದಾರೆ. ಹೌದು, ಎರಡು ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ 'ಅಲಾ ವೈಕುಂಠಪುರಮುಲೋ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಿನಿಮಾ ಆ ವರ್ಷದ ಸೂಪರ್ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಸಿನಿಮಾದ ಹಾಡುಗಳಂತೂ ಮಿಲಿಯನ್ ಗಟ್ಟಲೇ ವೀಕ್ಷಣೆಗಳನ್ನು ಪಡೆದವು.
ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳು ಆಗಿರುವುದರಿಂದ ಈ ಸೂಪರ್ ಹಿಟ್ ಚಿತ್ರದ ಶೂಟಿಂಗ್ ಕುರಿತು ಹಲವಾರು ವಿಚಾರಗಳನ್ನು ನಟಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಆದರೆ, ಅವರು ಹಂಚಿಕೊಂಡಿರುವ ಹಲವು ವಿಚಾರಗಳಲ್ಲಿ ಸದ್ಯ ಒಂದು ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದುವೇ, ನಟಿ ಪೂಜಾ ಹೆಗ್ಡೆ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಜತೆ ಕುಣಿದಿರುವ ವಿಡಿಯೋ. ನಟಿ ತಮ್ಮ ವ್ಯಾನಿಟಿ ವ್ಯಾನ್‌ನಲ್ಲಿ ಅರ್ಹಾ ಅವರೊಂದಿಗೆ ಆ ಸಿನಿಮಾದ 'ರಾಮುಲೋ ರಾಮುಲೋ' ಹಾಡಿನ ಹುಕ್ ಸ್ಟೆಪ್ ಅನ್ನು ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. 
ತ್ರಿವಿಕ್ರಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಟಬು, ಸುಶಾಂತ್ ಎ, ನಿವೇತಾ ಪೇತುರಾಜ್, ಜಯರಾಮ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಭಾರೀ ಹಿಟ್ ಆಗಿತ್ತು. ನಂತರ, ಬುಟ್ಟ ಬೊಮ್ಮಾ ಎಂದೇ ಕರೆಸಿಕೊಳ್ಳುತ್ತಿರುವ ನಟಿ ಪೂಜಾ ಹೆಗ್ಡೆ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, 1.2 ಮಿಲಿಯನ್​ಗೂ ಹೆಚ್ಚು ಲೈಕ್ಸ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಪಡೆದಿದೆ. ಜೊತೆಗೆ, ನಟಿಯ ವಿಡಿಯೋ ಮೇಲೆ 4,000ಕ್ಕೂ ಹೆಚ್ಚು ಕಾಮೆಂಟ್​ಗಳ ಸುರಿ ಮಳೆಯೇ ಅಭಿಮಾನಿಗಳಿಂದ ಸುರಿದಿದೆ. ಅದೇನೇ ಇರಲಿ, ಈ ವಿಡಿಯೋದಲ್ಲಿ ಅಭಿಮಾನಿಗಳಿಗೆ ಕೇವಲ ಒಂದು ಬುಟ್ಟ ಬೊಮ್ಮಾ ಅಲ್ಲದೇ ಬದಲಿಗೆ ಎರಡು ಬುಟ್ಟ ಬೊಮ್ಮಗಳನ್ನು ಕಾಣುವ ಅದೃಷ್ಟ ದೊರಕಿದೆ ಎಂದೇ ಹೇಳಬೇಕು.