ಅನಾರೋಗ್ಯದಿಂದ ಮೃತಪಟ್ಟ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಕರ್ನಾಟಕ ಮುಖ್ಯಮಂತ್ರಿ ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಖಾನ್ ಮೃತಪಟ್ಟ 24 ಗಂಟೆಯಲ್ಲೇ ಬಾಲಿವುಡ್ ಕ್ಷೇತ್ರ ಇನ್ನೋರ್ವ ದಿಗ್ಗಜನನ್ನು ಕಳೆದುಕೊಂಡಿದೆ ಎಂದು ಹಲವರು ನೋವಿನಿಂದ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ನ ಇನ್ನೋರ್ವ ಲೆಜೆಂಡ್, ಹಿರಿಯ ನಟ ರಿಷಿ ಕಪೂರ್ ಅವರ ನಿಧನದಿಂದ ಶಾಕ್ ಆಗಿದೆ. ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರ ಅಮೋಘ ಅಭಿನಯವನ್ನು ಯಾವಾಗಲೂ ಮರೆಯಲು ಸಾಧ್ಯವಿಲ್ಲ. ಅದಿನ್ನು ತುಂಬ ಮಿಸ್ ಆಗುತ್ತದೆ. ರಿಷಿ ಕಪೂರ್ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
| ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ, ಕರ್ನಾಟಕ
ನಟ ರಿಷಿ ಕಪೂರ್ ಸಾವಿನಿಂದ ದುಃಖಿತನಾಗಿದ್ದೇನೆ. ತಮ್ಮ ವಿಭಿನ್ನ ಶೈಲಿ, ಅಭಿನಯದಿಂದ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಅವರಿಗೆ ಸರಿಸಾಟಿ ಯಾರೂ ಇಲ್ಲ. ಅವರ ನಿಧನಕ್ಕೆ ನನ್ನ ಸಂತಾಪಗಳು. ಓಂ ಶಾಂತಿ
| ರಾಜನಾಥ ಸಿಂಗ್, ಕೇಂದ್ರ ರಕ್ಷಣಾ ಸಚಿವ
ಇದು ಭಾರತದ ಬಾಲಿವುಡ್ ಸಿನಿಮಾ ಕ್ಷೇತ್ರದ ಪಾಲಿಗೆ ಅತ್ಯಂತ ಭಯಾನಕವಾದ ವಾರ. ಇಂದು ಇನ್ನೋರ್ವ ಅದ್ಭುತ ನಟ ರಿಷಿ ಕಪೂರ್ ನಮ್ಮಿಂದ ದೂರ ಆಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದ ಮಹಾನ್ ನಟನನ್ನು ನಾವು ಖಂಡಿತ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ.
| ರಾಹುಲ್ ಗಾಂಧಿ, ಸಂಸದರು, ಕಾಂಗ್ರೆಸ್
ನಟ ರಿಷಿ ಕಪೂರ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳ ಪಾಲಿಗೆ ಇದೊಂದು ಆಘಾತಕಾರಿ ಸುದ್ದಿ. ಅವರಿಗೆಲ್ಲ ಈ ಸಂದರ್ಭವನ್ನು ಎದುರಿಸುವ ಶಕ್ತಿಯನ್ನು ದೇವರು ನೀಡಲಿ. ರಿಷಿ ಕಪೂರ್ ಅವರು ನಿಭಾಯಿಸಿದ ಐಕಾನಿಕ್ ರೋಲ್ಗಳಿಂದ ಸದಾ ಜನಮಾನಸದಲ್ಲಿ ಉಳಿಯುತ್ತಾರೆ.
| ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ
ರಿಷಿ ಕಪೂರ್ ಅವರ ಆಕಸ್ಮಿಕ ಸಾವಿನಿಂದ ಶಾಕ್ ಆಗಿದೆ. ಅವರು ಅದ್ಭುತ ನಟನಷ್ಟೇ ಅಲ್ಲ, ತುಂಬ ಒಳ್ಳೆಯ ವ್ಯಕ್ತಿ ಕೂಡ ಹೌದು. ಅವರ ಕುಟುಂಬ, ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ
| ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವರು
ನಟ ರಿಷಿ ಕಪೂರ್ ಸಾವಿನಿಂದ ತೀವ್ರ ನೋವಾಗಿದೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವು ತಲೆಮಾರುಗಳನ್ನು ರಂಜಿಸಿದ್ದಾರೆ. ಅವರ ಸಾವು ತುಂಬಲಾರದ ನಷ್ಟ. ರಿಷಿ ಕಪೂರ್ ಆತ್ಮ ಶಾಂತಿಯಲ್ಲಿ ನೆಲೆಸಲಿ.
| ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ