ಬೆಂಗಳೂರು: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸಿನಿಮಾ ಮಂದಿ ಕಡೆಗಳಿಂದಲೂ ಕರೊನಾ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿಸುತ್ತಿದೆ. ಸಿನಿಮಾಗಳ ಡೈಲಾಗ್ಗಳನ್ನೂ ಬಳಸಿಕೊಳ್ಳುತ್ತಿದೆ. ಈಗ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಾಣ’ ಸಿನಿಮಾದ ಇದು ಚರಿತ್ರೆ ಸೃಷ್ಟಿಸೋ ಅವತಾರ ಡೈಲಾಗ್ ಬಳಸಿಕೊಂಡು ಜಾಗೃತಿ ಮೂಡಿಸಿದೆ ಪೊಲೀಸ್ ಇಲಾಖೆ. ಅಧಿಕೃತ ಟ್ವಿಟರ್ ಖಾತೆಯಲ್ಲಿ, ‘ಇದು ಚರಿತ್ರೆ ಸೃಷ್ಟಿಸೋ ಅವತಾರ, ಮಾಸ್ಕ್ ಅಪ್ ಅದುವೆ ಸಿದ್ಧಾಂತ, ಹ್ಯಾಂಡ್ ವಾಷ್ ಈಗಿನ ವೇದಾಂತ‘ ಎಂದು ಬರೆಯಲಾಗಿದೆ. ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕರೊನಾವನ್ನು ಅರಿತವರೇ, ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂಬುದನ್ನೂ ಪೋಸ್ಟರ್ ಮೂಲಕ ಜಾಗೃತಿ ಮೂಡಿಸಲಾಗಿದೆ.