ಪ್ಲಾಸ್ಟಿಕ್ ಕವರ್​ ಹಿಡಿದು ಬಂದ ಸುಂದರಿ: ಇದರ​ ಬೆಲೆ ಕೇಳಿ ದಂಗಾದ ನೆಟ್ಟಿಗರು? ಆದ್ರೆ ಅಸಲಿ ಮ್ಯಾಟ್ರೇ ಬೇರೇ!​ Plastic Bag Red Carpet  
ಸಿನಿವಾಣಿ

ಪ್ಲಾಸ್ಟಿಕ್ ಕವರ್​ ಹಿಡಿದು ಬಂದ ಸುಂದರಿ: ಇದರ​ ಬೆಲೆ ಕೇಳಿ ದಂಗಾದ ನೆಟ್ಟಿಗರು? ಆದ್ರೆ ಅಸಲಿ ಮ್ಯಾಟ್ರೇ ಬೇರೇ!​ Plastic Bag Red Carpet

ಪ್ರಮುಖ ಮುಖ್ಯಾಂಶಗಳು

  • ನಮ್ಮನ್ನು ಆಳುವ ಸರ್ಕಾರಗಳು ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ
  • ಸೆಲೆಬ್ರಿಟಿಗಳ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಚಾರ ಮಾಡುತ್ತಿವೆ
  • ಮಾಲ್‌ಗಳು ಮತ್ತು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡದಂತೆ ಬ್ಯಾನ್​ ಮಾಡಲಾಗಿದೆ
  • ಇಲ್ಲೊಬ್ಬ ನಟಿ ಪ್ಲಾಸ್ಟಿಕ್​ ಕವರ್​ ಹಿಡಿದು, ರೆಡ್​ ಕಾರ್ಪೆಟ್​ ಮೇಲೆ ಪೋಸ್​​ ನೀಡಿರುವುದು ಎಲ್ಲರ ಗಮನ ಸೆಳೆದಿದೆ.
Plastic Bag Red Carpet : ನಮ್ಮನ್ನು ಆಳುವ ಸರ್ಕಾರಗಳು ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಅಲ್ಲದೆ, ಸೆಲೆಬ್ರಿಟಿಗಳ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಚಾರ ಮಾಡುತ್ತಿವೆ. ಅದೇ ರೀತಿ, ಮಾಲ್‌ಗಳು ಮತ್ತು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡದಂತೆ ಬ್ಯಾನ್​ ಮಾಡಲಾಗಿದೆ. ಒಂದು ವೇಳೆ ಮಾರಿದರೆ, ಭಾರಿ ದಂಡ ಕೂಡ ವಿಧಿಸಲಾಗುತ್ತದೆ. ಹೀಗಿರುವಾಗ ಇಲ್ಲೊಬ್ಬ ನಟಿ ರಾಜಾರೋಷವಾಗಿ ಪ್ಲಾಸ್ಟಿಕ್​ ಕವರ್​ ಹಿಡಿದು, ರೆಡ್​ ಕಾರ್ಪೆಟ್​ ಮೇಲೆ ಪೋಸ್​​ ನೀಡಿರುವುದು ಎಲ್ಲರ ಗಮನ ಸೆಳೆದಿದೆ.
ಚೀನಾದ ನಟಿ ಜಾಂಗ್ ಜಿಂಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ವಿಷಯವಾಗಿದ್ದಾರೆ. ಕಾರಣವೇನೆಂದರೆ, 2025ರ ಬೀಜಿಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ತೆಗೆದ ಕೆಲವು ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅಚ್ಚರಿಯ ಸಂಗತಿ ಏನೆಂದರೆ, ಫೋಟೋದಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿರುವುದು ನಟಿ ಧರಿಸಿರುವ ಉಡುಗೆಯಾಗಲಿ ಅಥವಾ ಆಭರಣಗಳಾಗಲಿ ಅಲ್ಲ. ಅಷ್ಟೇ ಏಕೆ, ಆಕೆಯ ಸೌಂದರ್ಯವೂ ಅಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಆಕೆ ಕೈಯಲ್ಲಿ ಹಿಡಿದಿರುವ ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್.
ಸಾಮಾನ್ಯವಾಗಿ ದಿನಸಿ ವಸ್ತುಗಳನ್ನು ಸಾಗಿಸಲು ಅಥವಾ ಕಸ ಎಸೆಯಲು ಬಳಸುವ ಪ್ಲಾಸ್ಟಿಕ್ ಕವರ್​ ಅನ್ನು ಬ್ಯಾಗ್ ರೀತಿ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಪೋಸ್​ ನೀಡಿದ್ದರಿಂದ ಆ ಫೋಟೋಗಳು ಎಲ್ಲರ ಗಮನ ಸೆಳೆದಿದೆ. ಇದೀಗ ಮತ್ತೊಮ್ಮೆ ಟ್ರೆಂಡಿಂಗ್ ಆಗಿದೆ.
ಈ ಫೋಟೋ ನೋಡಿದ ನೆಟ್ಟಿಗರು ಪ್ಲಾಸ್ಟಿಕ್ ಚೀಲವನ್ನು ಐಷಾರಾಮಿ ಬ್ರ್ಯಾಂಡ್ ಬಾಲೆನ್ಸಿಯಾಗ ವಿನ್ಯಾಸಗೊಳಿಸಿದೆ ಎಂದು ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಕೆಲವರು ಈ ಕವರ್​ನ ಬೆಲೆ ಸುಮಾರು 1,790 ಡಾಲರ್​ (ಭಾರತೀಯ ಕರೆನ್ಸಿಯಲ್ಲಿ ರೂ. 1,65,647) ಎಂದು ವದಂತಿ ಹರಡುತ್ತಿದ್ದಾರೆ. ಕೆಲವರಂತೂ ಜಾಲತಾಣದಲ್ಲಿ ಅದರ ಬೆಲೆ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅಸಲಿ ವಿಚಾರವೇ ಬೇರೆ ಇದೆ. ಅದೇನೆಂದು ನಾವೀಗ ತಿಳಿಯೋಣ.
ಅಂದಹಾಗೆ, ನಟಿ ಜಾಂಗ್ ಜಿಂಗಿ ಕೈಯಲ್ಲಿ ಹಿಡಿದಿರುವ ಪ್ಲಾಸ್ಟಿಕ್ ಸಾಮಾನ್ಯ ಪ್ಲಾಸ್ಟಿಕ್​. ಸಿನಿಮಾ ಪ್ರಚಾರದ ಭಾಗವಾಗಿ ಆ ಕವರ್​ ಅನ್ನು ಹಿಡಿದಿದ್ದರು. ಜಾಂಗ್ ನಟಿಸಿದ "ದಿ ಒನ್" ಚಿತ್ರದಲ್ಲಿನ ತನ್ನ ಪಾತ್ರವನ್ನು ಸಂಕೇತಿಸಲು ಅವರು ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಿದರು. ಆ ಚಿತ್ರದಲ್ಲಿ ತನ್ನ ಶ್ರವಣದೋಷವುಳ್ಳ ಪೋಷಕರ ನಡುವಿನ ಸಂವಹನ ಸಾಧನವಾಗಿ ಈ ಕವರ್​ ಅನ್ನು ಬಳಸುತ್ತಿದ್ದರು. ಹೀಗಾಗಿ, ರೆಡ್​ ಕಾರ್ಪೆಟ್​ ಮೇಲೆ ಹಿಡಿದು ಪೋಸ್​​ ನೀಡಿದ್ದರು. ಸುಮಾರು ಒಂದು ವರ್ಷಗಳ ಬಳಿಕ ಇದೀಗ ಮತ್ತೆ ಆ ಫೋಟೋ ವೈರಲ್​ ಆಗಿದೆ, (ಏಜೆನ್ಸೀಸ್​).