ಸೆರ್ಬಿಯಾ: ಏಪ್ರಿಲ್ 8 ರಂದು 40 ನೇ ವಸಂತಕ್ಕೆ ಕಾಲಿಟ್ಟ ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಒಂದು ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋದಲ್ಲಿ, ಅಲ್ಲು ಅರ್ಜುನ್ ಕೈಯಲ್ಲಿ ಫೈಯರ್ ಕ್ಯಾಂಡಲ್ ಹಿಡಿದು ಅವರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಅಂದಹಾಗೆ, ಅವರು ಹಂಚಿಕೊಂಡಿರುವ ಫೋಟೋ ಕಪ್ಪು ಬಿಳುಪಿನ ಫೋಟೋ ಆಗಿದ್ದು, ಅದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು, ತಮ್ಮ ಫೋಟೋಗೆ "40 ವರ್ಷಕ್ಕೆ ಸಂತೋಷ" ಎಂಬ ಟೈಟಲ್ ಅನ್ನು ಅಲ್ಲು ಅರ್ಜುನ್ ಕೊಟ್ಟಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ನಟ ಅಲ್ಲು ಅರ್ಜುನ್ ಅವರ ಈ ಫೋಟೋಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಬಂದಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ನಟ ಅಲ್ಲು ಅರ್ಜುನ್ ಅವರು ತಮ್ಮ ಹುಟ್ಟು ಹಬ್ಬವನ್ನು ಸೆರ್ಬಿಯಾ ದೇಶದ ಬೆಲ್ಗ್ರಾಡ್ನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ. ಅವರ 40 ನೇ ಹುಟ್ಟು ಹಬ್ಬ ಆಗಿರುವ ಕಾರಣ, ಈ ಹುಟ್ಟು ಹಬ್ಬದ ಆಚರಣೆಗಳು ತುಂಬಾನೆ ಸ್ಪೆಷಲ್ ಎನ್ನಲಾಗಿದೆ. 'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಹಿಟ್ ಆಗಿರುವ ಕಾರಣ ಕೂಡಾ ಅಲ್ಲು ಅವರಿಗೆ ಈ 40 ನೇ ಹುಟ್ಟು ಹಬ್ಬ ತುಂಬಾ ವಿಶೇಷ ಎಂದು ಹೇಳಬಹುದು.
ನಟ ಅಲ್ಲು ಅ್ಜುನ್ ಅವರ ಕುಟುಂಬದೊಂದಿಗೆ ಸೇರಿ ಒಟ್ಟು 50 ಸ್ನೇಹಿತರನ್ನು ತಮ್ಮೊಂದಿಗೆ ಸೆರ್ಬಿಯಾ ದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ, ನಟ ಅಲ್ಲು ಅರ್ಜುನ್ ಅವರು ಸೆರ್ಬಿಯಾ ದೇಶದಲ್ಲಿ ಆಚರಿಸಿಕೊಂಡ ಹುಟ್ಟು ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮಧ್ಯ ರಾತ್ರಿ ಅವರು ಕೇವಲ ಕುಟುಂಬದ ಜತೆಗೆ ಕೇಕ್ ಕತ್ತರಿಸಿದ ಫೋಟೋಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗಿದಾವೆ. ಜತೆಗೆ, ಸೆರ್ಬಿಯಾ ದೇಶಕ್ಕೆ ಹೋಗುವ ಮುಂಚೆ ನಟ ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಇರುವ ಒಂದು ವಿಡಿಯೋ ಕೂಡಾ ವೈರಲ್ ಆಗಿದೆ.