Samantha Ruth Prabhu ಚಿತ್ರ Instagram 
ಸಿನಿವಾಣಿ

ಸೆಲೆಬ್ರಿಟಿಗಳ ದೇಹದ ಮೇಲೇಕೆ ಇಷ್ಟೊಂದು ಕಣ್ಣು..? ಸಮಂತಾ ತೂಕ ಇಳಿಕೆಯ ಪ್ರಶ್ನೆಗಳಿಗೆ ಸಿಕ್ಕ ಆ ಶಾಕಿಂಗ್ ಉತ್ತರ ಇಲ್ಲಿದೆ! Samantha Ruth Prabhu

ಪ್ರಮುಖ ಮುಖ್ಯಾಂಶಗಳು

  • ನಾವು ಯಾವಾಗಲೂ ಸೆಲೆಬ್ರಿಟಿಗಳ ಲುಕ್‌ಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದೇವೆ
  • ವಿಶೇಷವಾಗಿ ಅವರು ಎಂದಿಗಿಂತಲೂ ಭಿನ್ನವಾಗಿ ಕಾಣುವಾಗ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ತೀವ್ರಗೊಳ್ಳುತ್ತವೆ
  • ಸ್ಲಿಮ್ ಲುಕ್‌ ಹಿಂದೆ ಇರುವುದು ಫ್ಯಾಷನ್ ಅಲ್ಲ, ಬದುಕಿನ ಹೋರಾಟ ಎಂದಿದ್ದೇಕೆ ಸಮಂತಾ?
  • ಆಟೋಇಮ್ಯೂನ್​ ಸಮಸ್ಯೆಯಿಂದ ಬಳಲುತ್ತಿರುವವರು ಎದುರಿಸುವ ಸವಾಲುಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ
Samantha Ruth Prabhu: ನಾವು ಯಾವಾಗಲೂ ಸೆಲೆಬ್ರಿಟಿಗಳ ಲುಕ್‌ಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸವನ್ನು ಮಾಡಿಕೊಂಡಿದ್ದೇವೆ. ವಿಶೇಷವಾಗಿ ಅವರು ಎಂದಿಗಿಂತಲೂ ಭಿನ್ನವಾಗಿ ಕಾಣುವಾಗ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ತೀವ್ರಗೊಳ್ಳುತ್ತವೆ. ಪ್ರಸ್ತುತ ನಟಿ ಸಮಂತಾ ರುತ್ ಪ್ರಭು ಅವರ ಇತ್ತೀಚಿನ ತೂಕ ನಷ್ಟ ಮತ್ತು ಅವರ ಶಾರೀರಿಕ ಬದಲಾವಣೆಗಳ ಬಗ್ಗೆ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್‌ಗಳು ಇಂಟರ್ನೆಟ್​ನಲ್ಲಿ ದೊಡ್ಡ ಸಂಭಾಷಣೆಯನ್ನು ಪ್ರಾರಂಭಿಸಿವೆ. ಆದಾಗ್ಯೂ, ತಮ್ಮ ತೂಕದ ಬಗ್ಗೆ ಕೇಳಿ ಬರುತ್ತಿರುವ ಊಹಾಪೋಹಗಳಿಗೆ ಸ್ವತಃ ಸಮಂತಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ​ಸ್ಪಷ್ಟನೆ ನೀಡಿದ್ದಾರೆ.

ಸಮಂತಾ ಹೇಳಿದ್ದೇನು?

ಆಟೋಇಮ್ಯೂನ್​ ಸಮಸ್ಯೆಯಿಂದ ಬಳಲುತ್ತಿರುವವರು ಎದುರಿಸುವ ಸವಾಲುಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ನನ್ನ ಆರೋಗ್ಯದ ಬಗ್ಗೆ ಗಮನಹರಿಸಲು ಚಿತ್ರರಂಗದಿಂದ ಸುಮಾರು 2 ವರ್ಷ ವಿರಾಮ ತೆಗೆದುಕೊಂಡಿದ್ದಾಗ ನನಗೆ ಆಹಾರವು ಪ್ರಚೋದನವಾಗಿತ್ತು. ಆದಾಗ್ಯೂ, ನನ್ನ ಕರುಳನ್ನು ಕೆರಳಿಸುವ ಯಾವುದೇ ಆಹಾರವನ್ನು ನಾನು ಸೇವಿಸಿದರೆ, ಸ್ವಯಂ ನಿರೋಧಕ ಸ್ಥಿತಿಯನ್ನು ಪ್ರಚೋದಿಸುತ್ತದೆ. ಆದರಿಂದ ನನ್ನ ಆಹಾರ ಬಹಳಷ್ಟು ಸಪ್ಪೆಯಾಯಿತು. ಎರಡು ವರ್ಷಗಳ ಕಾಲ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅದೇ ಆಹಾರವನ್ನು ಅನುಸರಿಸಬೇಕಾಯಿತು ಎಂದು ಹೇಳಿದರು.
ಈಗ ನಾನು ಆರಾಮವಾಗಿ ಆಹಾರ ಸೇವಿಸುವಂತಹ ಒಂದು ಒಳ್ಳೆಯ ಸ್ಥಿತಿಯಲ್ಲಿದ್ದೇನೆ. ಅತಿಯಾಗಿ ಅಲ್ಲದಿದ್ದರೂ, ಚೆನ್ನಾಗಿ ತಿನ್ನುತ್ತಿದ್ದೇನೆ. ಆದರೆ ಜನರು ಯಾವಾಗಲೂ ನನ್ನನ್ನು ನೀವು ಯಾಕೆ ಇಷ್ಟೊಂದು ತೂಕ ಕಳೆದುಕೊಂಡಿದ್ದೀರಿ? ಎಂದೇ ಪ್ರಶ್ನಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಯ ಜೀವನದ ಒಳಗೆ ನಿಜವಾಗಿ ಏನು ನಡೆಯುತ್ತಿದೆ ಎಂಬುದು ಜನರಿಗೆ ಎಂದಿಗೂ ತಿಳಿಯುವುದೇ ಇಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.

ಬೆಕ್ಕಿನ ಹೆಸರಿನ ಹಿಂದಿದೆ ಭಾವನಾತ್ಮಕ ಕಥೆ!

ಆರೋಗ್ಯದ ಕಠಿಣ ದಿನಗಳಲ್ಲಿ ವೈದ್ಯರು ಕಟ್ಟುನಿಟ್ಟಾದ ಪಥ್ಯವನ್ನು ಹೇಳಿದ್ದರು. ಅದಾದ ಬಳಿಕ ನನಗೆ ಆಹಾರದಲ್ಲಿ ಸೇರಿಸಿಕೊಳ್ಳಲು ಮೊದಲ ಬಾರಿಗೆ ಅನುಮತಿ ನೀಡಿದ್ದು, ಸಕ್ಕರೆ ಮತ್ತು ಡೈರಿ (ಹಾಲು) ಇಲ್ಲದ ಜೆಲಾಟೊ. ಆ ಸಮಯದಲ್ಲಿ ನಾನು ಆ ಜೆಲಾಟೊ ತಿನ್ನುವುದನ್ನು ನಿಜವಾಗಿಯೂ ತುಂಬಾ ಎದುರು ನೋಡುತ್ತಿದ್ದೆ. ಹಾಗಾಗಿ, ನಾನು ಬೆಕ್ಕನ್ನು ಸಾಕಲು ನಿರ್ಧರಿಸಿದಾಗ, ಅದಕ್ಕೆ ಪ್ರೀತಿಯಿಂದ 'ಜೆಲಾಟೊ' ಎಂದೇ ಹೆಸರನ್ನಿಟ್ಟೆ ಎಂದಿದ್ದಾರೆ.

ಸಿನಿಮಾ ರಿಲೀಸ್​​ಗೂ ಮುನ್ನ ತಿಮ್ಮಪ್ಪನ ದರ್ಶನ!

ಗುರುವಾರ (ಜೂ.18) ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ತಿರುಪತಿಯ ದರ್ಶನ ಪಡೆದಿದ್ದಾರೆ.ಈ ವೇಳೆ ಅವರು ನಿರ್ದೇಶಕ ರಾಜ್​ ನಿಡಿಮೋರು, ಮಾ ಇಂಟಿ ಬಂಗಾರಂ ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ, ಸಮಂತಾ, ನಟಿ ಶ್ರೀ ಮುಖಿಯವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಕತೆ ಏನು?

ನಂದಿನಿ ರೆಡ್ಡಿ ಅವರು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಸಮಂತಾ ಅವರನ್ನು ಒಳ್ಳೆಯ ಫೈಟರ್​ ಆಗಿ ತೋರಿಸಿದ್ದಾರೆ. ಮೊದಲು ಈ ಸಿನಿಮಾ ಸ್ಪೈ ಕತೆಯನ್ನಾಧರಿಸಿದ್ದು ಎನ್ನಲಾಗಿತ್ತು. ಆದರೆ, ಇದು ಒಬ್ಬ ಮಹಿಳೆ ತನ್ನ ಕುಟುಂಬ ಎಂದು ಬಂದಾಗ ಎಷ್ಟೆಲ್ಲ ರಕ್ಷಣೆಗೆ ನಿಲ್ಲುತ್ತಾಳೆ ಎನ್ನುವುದು ಕತೆಯಹಂದರ ಎಂದು ನಿರ್ದೇಶಕಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​, ಕಾಮಿಡಿ ಎಂಟರ್​ಟೇನ್​ಮೆಂಟ್​ ಸಿನಿಮಾವಾಗಿದೆ. ಕಥಾ ನಾಯಕಿ ತನ್ನ ಹಿಂದಿನ ದಿನಗಳ ರಹಸ್ಯವನ್ನು ಬಚ್ಚಿಟ್ಟು, ಹೊಸಜೀವನವನ್ನು ಆರಂಭಿಸುತ್ತಾರೆ. ಸಾಧಾರಣ ಗೃಹಿಣಿಯಾಗಿ ಬದುಕುವ ಹೊತ್ತಲ್ಲಿ ಎದುರಾಗುವ ಸವಾಲು, ಕುಟುಂಬದ ರಕ್ಷಣೆ ಹೇಗೆ ಮಾಡುತ್ತಾಳೆ ಎನ್ನುವುದು ಇದರ ಕತೆಯಾಗಿದೆ (ಏಜೆನ್ಸೀಸ್​).