ಸಿನಿವಾಣಿ

ಬೂಸಾನ್ ಚಿತ್ರೋತ್ಸವಕ್ಕೆ ಪೆಡ್ರೋ

ಬೆಂಗಳೂರು: ಕಳೆದ ವರ್ಷ ಕಾನ್ಸ್ ಚಿತ್ರೋತ್ಸವದ ‘ಗೋಸ್ ಟು ಕಾನ್ಸ್’ ವಿಭಾಗಕ್ಕೆ ಆಯ್ಕೆಯಾಗಿದ್ದ ರಿಷಬ್ ಶೆಟ್ಟಿ ನಿರ್ವಣದ ‘ಪೆಡ್ರೋ’ ಚಿತ್ರವು, ಇದೀಗ ಬೂಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ಅಲ್ಲಿ ನ್ಯೂ ಕರೆಂಟ್ ಸೆಕ್ಷನ್ ವಿಭಾಗಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕೂ ಮುನ್ನ ಬೂಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಹರಿಕಥಾ ಪ್ರಸಂಗ’, ‘ಪಿಂಕಿ ಎಲ್ಲಿ’ ಮುಂತಾದ ಚಿತ್ರಗಳು ಪ್ರದರ್ಶನವಾಗಿವೆ. ಆದರೆ, ಅಲ್ಲಿನ ನ್ಯೂ ಕರೆಂಟ್ ಸೆಕ್ಷನ್ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಆಯ್ಕೆಯಾಗಿ ಪ್ರದರ್ಶನವಾಗುತ್ತಿರುವುದು ವಿಶೇಷ. ಇದಲ್ಲದೆ ಇನ್ನಷ್ಟು ಚಿತ್ರೋತ್ಸವಗಳಿಗೆ ಚಿತ್ರವನ್ನು ಕಳುಹಿಸಲಾಗಿದೆಯಂತೆ. ಇನ್ನು, ಚಿತ್ರವನ್ನು ಚಿತ್ರಮಂದಿರಗಳಲ್ಲೇ ಮೊದಲು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಟೇಶ್. ‘ಪೆಡ್ರೋ’ ಚಿತ್ರವನ್ನು ನಟೇಶ್ ಹೆಗಡೆ ನಿರ್ದೇಶನ ಮಾಡಿದ್ದಾರೆ. ಗೋಪಾಲ ಹೆಗಡೆ, ರಾಮಕೃಷ್ಣ ದುಂಡಿ, ರಾಜ್ ಬಿ ಶೆಟ್ಟಿ, ಮೇಧಿನಿ ಕೆಳಮನೆ ಮುಂತಾದವರು ನಟಿಸಿದ್ದಾರೆ. ವಿಕಾಸ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ.