- ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಪಾತ್ರದ ಗ್ಲಿಂಪ್ಸ್ ರಿಲೀಸ್
- ಕುಸ್ತಿ ತರಬೇತುದಾರ ಗುರುನಾಯ್ಡು ಆಗಿ ಶಿವಣ್ಣ ಮಿಂಚಿಂಗ್
- ಶಿವರಾಜ್ಕುಮಾರ್ರ ವಿಶೇಷ ಆಕ್ಟಿಂಗ್ಗೆ ಫ್ಯಾನ್ಸ್ ಫಿದಾ
Peddi Movie Shivanna: ಬಹುನಿರೀಕ್ಷಿತ ಸಿನಿಮಾ ಪೆದ್ದಿ ರಿಲೀಸ್ಗಾಗಿ ನಟ ರಾಮಚರಣ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹಲವಾರು ವಿಳಂಬದ ನಂತರ ಜೂನ್.4ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಡೇಟ್ ಫಿಕ್ಸ್ ಮಾಡಿದ್ದು, ಜೂನ್2ರಂದು ಪ್ರೀ ರಿಲೀಸ್ ಇವೆಂಟ್ ಇರಲಿದೆ ಎನ್ನಲಾಗಿದೆ.
ಪೆದ್ದಿ ಕತೆ ಏನು?
1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಕ್ರೀಡೆಯ ಬಗ್ಗೆ ಕತೆಯನ್ನು ಹೊಂದಿರುವ ಈ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಘಟಾನುಘಟಿ ತಾರೆಯರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಗಪತಿ ಬಾಬು, ಬುಚ್ಚಿಬಾಬು ಸನಾ, ಜಾನ್ವಿ ಕಪೂರ್ ಶಿವರಾಜ್ ಕುಮಾರ್ ಇದ್ದಾರೆ. ಸದ್ಯ ಚಿತ್ರತಂಡವು ಸಿನಿಮಾ ರಿಲೀಸ್ಗೆ ಇನ್ನು 20 ದಿನ ಬಾಕಿ ಇರುವಾಗ ಶಿವಣ್ಣನ ಗುರುನಾಯ್ಡು ಆಗಿ ಹೇಗೆ ನಟಿಸಿದ್ದಾರೆ ಎನ್ನುವ ಸಣ್ಣ ಗ್ಲಿಂಪ್ಸ್ನ್ನು ರಿಲೀಸ್ ಮಾಡಿದೆ.
ಆಕ್ಟಿಂಗ್ ಫಿದಾ
63ನೇ ವಯಸ್ಸಿನಲ್ಲಿ ಅವರ ಗತ್ತು-ಗಮ್ಮತ್ತನ್ನು ಕಂಡು ಮನಸೋತು, ಏನ್ ಆಕ್ಟಿಂಗ್ ಗುರು ಬೆಂಕಿ ಬೆಂಕಿ ಎಂದಿದ್ದಾರೆ. ಮೇ14ರ ಸಂಜೆ ಗುರುನಾಯ್ಡು ಪರಿಚಯದ ಗ್ಲಿಂಪ್ಟ್ ಅನ್ನು ಪವರ್ ಪ್ರೆಸೆನ್ಸ್ ಗುರುನಾಯ್ಡು ಬರುತ್ತಿದ್ದಾರೆ. ಶಿವರಾಜ್ ಕುಮಾರ್ ಪೆದ್ದಿ ವರ್ಲ್ಡ್ಗೆ ಕಾಲಿಡುತ್ತಿದ್ದಾರೆ. ಎಂದು ಶೀರ್ಚಿಕೆ ಕೊಟ್ಟುಕೊಂಡಿದ್ದಾರೆ.
ಜಟ್ಟಿ ಶಿವಣ್ಣ
ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ಕುಸ್ತಿ ಪಟು ತರಬೇತುದಾರರಾಗಿ ನಟಿಸಿದ್ದಾರೆ. ಜೊತೆಗೆ ಅವರು ರಾಮ್ಚರಣ್ ಅವರಿಗೆ ಮಾರ್ಗದರ್ಶಕರು. ಅವರ ಕುಸ್ತಿ ಜ್ಞಾನ ಎಷ್ಟಿದೆ ಎನ್ನುವುದನ್ನು ತೋರಿಸಲು ಜಟ್ಟಿಯೊಬ್ಬನನ್ನು ಮೇಲಕ್ಕೆ ಎತ್ತಿ ನೆಲಕ್ಕೆ ಕೊಡುವುವ ದೃಶ್ಯದಲ್ಲಿದೆ. ಸಿನಿಮಾ ಪಾತ್ರಧಾರಿಗಳ ಬಗ್ಗೆ ಪೆದ್ದಿ ತಂಡ ವಿಡಿಯೋ ರಿಲೀಸ್ ಮಾಡುತ್ತಿರುವುದು ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
ಮೇ18ರಂದು ಟ್ರೇಲರ್ ರಿಲೀಸ್
ಮುಂಬೈನಲ್ಲಿ ಅದ್ದೂರಿ ಕಾರ್ಯಕ್ರಮದಲ್ಲಿ ಪೆದ್ದಿ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ರಾಮ್ ಚರಣ್ ಅವರು ರಂಗಸ್ಥಳಂ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಪೆದ್ದಿಯಲ್ಲಿ ಇನ್ನಷ್ಟು ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಎಆರ್ ರೆಹಮಾನ್ ಸಂಯೋಜನೆಯ ಸಂಗೀತ ಮೂಡಿಬಂದಿರುವುದು ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್, (ಏಜೆನ್ಸೀಸ್).