Peddi Cast Fees: ರಾಮ್ ಚರಣ್, ಜಗಪತಿ ಬಾಬು, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿ ತಾರೆಯರೇ ಇರುವ ಪೆದ್ದಿ ಸಿನಿಮಾ ಜೂನ್ 4ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರತಂಡ ಗುರುನಾಯ್ಡು ಆಗಿರುವ ಶಿವಣ್ಣನ ಪಾತ್ರದ ಬಗ್ಗೆ ಪರಿಚಯ ಮಾಡಿಕೊಡುವ ಮೂಲಕ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿತ್ತು. ಈ ಮೂಲಕ ಮತ್ತೊಂದು ಕಾಡುತ್ತಿರುವ ಕೆಟ್ಟ ಕುತೂಹಲ ಎಂದರೆ ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವುದು. ಆ ಬಗ್ಗೆ ಮಾಹಿತಿ ಇಲ್ಲಿದೆ
ರಾಮ್ ಚರಣ್ ಸಂಬಾವನೆ ಎಷ್ಟು?
ಹೌದು ಬುಚ್ಚಿ ಬಾಬು ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ರಾಮ್ಚರಣ್ ಅವರು ಪೆದ್ದಿ ಪೆಹಲ್ವಾನ್ ಪೈಲ್ವಾನನ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಧಾರಿಯಾಗಿ ನಟಿಸಲು ಅವರು 60 ರಿಂದ 70 ಕೋಟಿ ಗಳಿಸಿದ್ದಾರೆ ಎನ್ನುವ ಊಹೆಪೋಹವಿದೆ. ರಾಮ್ಚರಣ್ ಈ ಸಿನಿಮಾ ಮಾತ್ರವಲ್ಲ ರಂಗಸ್ಥಳಂನಲ್ಲಿಯೂ ಗ್ರಾಮೀಣ ಭಾಗದ ಯುವಕನಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾವನ್ನು ಬುಚ್ಚಿ ಬಾಬು ಅವರ ಗುರುಗಳಾ ಸುಕುಮಾರನ್ ಅವರೇ ನಿರ್ದೇಶಿಸಿದ್ದರು.
ಜಾಹ್ನವಿ ಕಪೂರ್ ಸಂಭಾವನೆ ಎಷ್ಟು?
ಜಾಹ್ನವಿ ಕಪೂರ್ ಅವರು ಪೆದ್ದಿ ಸಿನಿಮಾದಲ್ಲಿ ಆಚಿಯಮ್ಮ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಜಾಹ್ನವಿ ಕಪೂರ್ ತಂಗಿ ಖುಷಿ ಕಪೂರ್ಗೆ ವಿವರಿಸಿದ್ದರು ಎನ್ನಲಾಗಿದೆ. ಈ ಸಿನಿಮಾದಲ್ಲಿ ಜಾಹ್ನವಿ ಅವರಿಗೆ 5 ರಿಂದ ಆರು ಕೋಟಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ದೇವರ ಮೂಲಕ ಅವರು ಟಾಲಿವುಡ್ಗೆ ಕಾಲಿಟ್ಟಿದ್ದರು.
ದಿವ್ಯೆಂದು ಶರ್ಮಾ
ದಿವ್ಯೆಂದು ಶರ್ಮಾ ಅವರು ಪೆದ್ದಿ ಸಿನಿಮಾದಲ್ಲಿ ರಾಮ್ ಬುಜ್ಜಿ ಪಾತ್ರಧಾರಿಯಾಗಿ ನಟಿಸಲಿದ್ದಾರೆ. ಇದು ಪ್ರಮುಖ ಪಾತ್ರವೂ ಹೌದು. ಇತ್ತೀಚೆಗೆ ರಿಲೀಸ್ ಆಗಿರುವ ಅವರ ಫಸ್ಟ್ ಲುಕ್ ನೋಡುಗರ ನಿದ್ದೆಗೆಡಿಸಿತ್ತು. ಈ ಸಿನಿಮಾಗಾಗಿ ಅವರು ಮೂರರಿಂದ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಗುರುನಾಯ್ಡು ಶಿವಣ್ಣಗೆ ಇಷ್ಟೇ ಸಂಭಾವನೆನಾ?
ಗುರುನಾಯ್ಡು ಕುಸ್ತಿ ತರಬೇತುದಾರನಾಡಿ ಖಡಕ್ ಆಗಿ ನಟಿಸಿರುವ ಶಿವರಾಜ್ ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ 4ರಿಂದ 5 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಗ್ಯ ಏರುಪೇರು ಮಧ್ಯೆಯು ಸಂಪೂರ್ಣ ಅವರ ಪಾತ್ರದ ಮೇಲೆ ಹಾಕಿರುವ ಶ್ರಮಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಜಗಪತಿ ಬಾಬುಗೆ ಸಿಕ್ಕಿದ್ದೆಷ್ಟು?
ಪೆದ್ದಿ ಸಿನಿಮಾದಲ್ಲಿ ಜಗಪತಿ ಬಾಬು ಪಾತ್ರ ಅಪ್ಪಲಸೂರಿ ಎಂದು ಇದಕ್ಕಾಗಿ ಅವರು 2 ರಿಂದ 4 ಕೋಟಿ ಪಡೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ರಂಗಸ್ಥಳಂನಲ್ಲಿ ವಿಲನ್ ಪಾತ್ರ ಮಾಡಿದ್ದರು. ಪೆದ್ದಿಯಲ್ಲಿ ವಿಲನ್ ಅಥವಾ ಏನು ಅನ್ನೋದನ್ನು ಕಾದು ನೋಡಬೇಕಾಗಿದೆ.
ಬಾಲಿವುಡ್ ನಟ ಬೊಮನ್ ಇರಾನಿ ಪಡೆದ ಸಂಭಾವನೆ ಇಷ್ಟು!
ಪೆದ್ದಿ ಸಿನಿಮಾದಲ್ಲಿ ನಟಿಸಿರುವ ಖ್ಯಾತಿ ಬಾಲಿವುಡ್ ನಟ ಬೊಮನ್ ಇರಾನಿಯವರು ಯಾವ ಪಾತ್ರದಲ್ಲಿ ಇಲ್ಲಿ ಬಣ್ಣ ಹಚ್ಚಿದ್ದಾರೆ ಎಂಬ ಮಾಹಿತಿ ಹೊರಬಿದ್ದಿಲ್ಲ. ಆದರೆ ಇವರು ಸಹ ಸಿನಿಮಾದ ಅವಿಭಾಜ್ಯ ಅಂಗ ಎಂದು ಹೇಳಲಾಗುತ್ತಿದೆ. ಇವರ ಸಂಭಾವನೆ 1 ರಿಂದ 2 ಕೋಟಿ ಇರಬಹುದು ಎಂದು ಊಹಿಸಲಾಗಿದೆ, (ಏಜೆನ್ಸೀಸ್).