ಸಿನಿವಾಣಿ

ಎಣ್ಣೆ ಬೇಕೇಬೇಕು ಅಂತ ಹಠ ಮಾಡೋವ್ರನ್ನ ಪತ್ತೆ ಹಚ್ಚುವ ಕೆಲಸಕ್ಕೆ ಇಳಿದ್ರಾ ನಿರ್ದೇಶಕ ಪವನ್​ ಒಡೆಯರ್​?

ಬೆಂಗಳೂರು: ನಿರ್ದೇಶಕ ಪವನ್​ ಒಡೆಯರ್​ ಸದ್ಯ "ರೇಮೋ' ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಮನೆಯಲ್ಲಿದ್ದಾರೆ. ಹೀಗಿರುವಾಗಲೇ ಮನೆಯಲ್ಲಿದ್ದುಕೊಂಡೇ ಹೊಸ ಕೆಲಸಕ್ಕೂ ಅವರು ಮುಂದಾಗಿದ್ದಾರೆ. ಆ ಕೆಲಸ ನಿಜಕ್ಕೂ ಒಂಥರಾ ಮಜವಾಗಿದೆ. ಎಣ್ಣೆ ಬೇಕು ಬೇಕು ಅಂತ ಹಠ ಮಾಡ್ತಿರೋರನ್ನು ಹಿಡಿದು ಕೊಡುವ ಕೆಲಸವದು. ಅರೇ ಸರ್ಕಾರ ಏನಾದ್ರೂ ಅವರನ್ನು ಈ ಕೆಲಸಕ್ಕೆ ನೇಮಿಸಿತಾ ಎಂದು ಅಂದುಕೊಳ್ಳಬೇಡಿ. ಇದು ಬರಿ ತಮಾಷೆಗಷ್ಟೇ. ಅಂದರೆ, ಮೊದಲ ಬಾರಿ ಮೀಮ್​ ಕ್ರಿಯೇಟ್​ ಮಾಡಿರುವ ಪವನ್​ ಒಡೆಯರ್​, "ರೇಮೋ' ಚಿತ್ರದ ವಕಿರ್ಂಗ್​ ಫೋಟೋಕ್ಕೆ "ನೋಡು ನೋಡು ಅವ್ರೆ, ಎಣ್ಣೆ ಬೇಕೇಬೇಕು ಅಂತ ಹಠ ಮಾಡ್ತಿರೋರು' ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ.