ಎಂಟು ವರ್ಷಗಳ ನಂತರ ಅಭಿಮಾನಿಗಳ ಕಣ್ಣಿಗೆ ಬಿದ್ದ ನಟಿ ದೀಪಾ ಸನ್ನಿಧಿ.
ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಷ್ ಮಾಡಿದ ಪರಮಾತ್ಮನ ನಟಿ.
ದೀಪಾವಳಿಗೆ ನಟಿ ದೀಪಾ ಬಂದ್ರು ಎಂದು ಸಂಭ್ರಮ.
Kannada Actress Deppa Sannidhi Back: ಪರಮಾತ್ಮ, ಸಾರಥಿ, ಜಾನು, ಚಕ್ರವರ್ತಿ, ಸಕ್ಕರೆ ಹೀಗೆ ಸಾಲು ಸಾಲು ಸಿನಿಮಾದಲ್ಲಿ ನಟಿಸಿ, ಸೋಶಿಯಲ್ ಮೀಡಿಯಾದಿಂದ, ಸಿನಿಮಾ ರಂಗದಿಂದ ದೂರವಿದ್ದ ದೀಪಾ ಸನ್ನಿಧಿ ಅವರು, ದೀಪಾವಳಿ ಹಬ್ಬಕ್ಕೆ ಪ್ರತ್ಯಕ್ಷರಾಗಿದ್ದಾರೆ. 2018ರಲ್ಲಿ ಕೊನೆಯದಾಗಿ ಇನ್ಸ್ಟಾಗ್ರಾಮ್ನಲ್ಲಿ ವಿಲ್ ಬಿ ಬ್ಯಾಕ್ ಸೂನ್ ಎಂಬ ಸಂದೇಶ ಹಂಚಿಕೊಂಡು ಕಣ್ಮರೆಯಾದ ಅವರು..ಮತ್ತೆ ಕಾಣಿಸಿಕೊಳ್ಳಲು ಬರೋಬ್ಬರಿ 8 ವರ್ಷ ಬೇಕಾಯಿತು.
ದೀಪಾವಳಿ ಹಬ್ಬದ ಶುಭಾಷಯ ಎನ್ನುವ ಮೂಲಕ ಎಂಟು ವರ್ಷಗಳಿಂದ ಪ್ರೀತಿ ಕೊಡುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಕಂದು ಬಣ್ಣದ ಲೆಹಂಗಾ ತೊಟ್ಟು, ಹಿಂದೂ ಸಂಪ್ರದಾಯದಂತೆ ಹಣೆಗೆ ಬೊಟ್ಟಿಟ್ಟು, ಕೂದಲು ಕಟ್ಟಿದ್ದಾರೆ. ಚಿನ್ನದ ಬಣ್ಣದ ನೆಕ್ಲೇಸ್ ಸಿಂಪಲ್ ಮೇಕಪ್ ಅವರ ಅಂದವನ್ನು ಹೆಚ್ಚಿಸಿದೆ. ಅವರ ಈ ಒಂದು ಪೋಸ್ಟ್ ಒಂದು ಲಕ್ಷದ ನಲವತ್ತೈದು ಸಾವಿರ ವ್ಯೂವ್ಸ್ ಪಡೆದುಕೊಂಡಿದ್ದು, 576 ಬಾರಿ ರೀಶೇರ್ ಆಗಿದೆ. 11 ಸಾವಿರ ಜನರು ಶೇರ್ ಮಾಡಿಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಇವೆ.
ದೀಪಾ ಸನ್ನಿಧಿ ಸ್ಯಾಂಡಲ್ವುಡ್ನ ಅತ್ಯತ್ತಮ ನಟಿ..ಕಾಲೇಜು ದಿನಗಳಲ್ಲೇ ಆಡಿಷನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಅವರು, ಪರಮಾತ್ಮ, ಜಾನು, ಸಕ್ಕರೆ, ಎಂದೆಂದು ನಿನಗಾಗಿ, ಚೌಕ, ಎನಕ್ಕುಲ್ ಒರುವನ್ ಸಿನಿಮಾದಲ್ಲಿ ನಟಿಸಿ ಕಣ್ಮರೆಯಾದರು. 2011ರಲ್ಲಿ ನಟ ದರ್ಶನ್ ಜೊತೆಗಿನ ಸಾರಥಿ ಸಿನಿಮಾವು ಅವರಿಗೆ ಸಾಕಷ್ಟು ಹಿಟ್ ತಂದುಕೊಟ್ಟಿತ್ತು. ಇದು ಅವರ ಮೊದಲ ಸಿನಿಮಾವಾಗಿತ್ತು. ಆ ಸಿನಿಮಾ ಬೆನ್ನಲ್ಲೇ ಅವರಿಗೆ ಸಾಕಷ್ಟು ಆಫರ್ಗಳು ಬಂದವು ಪುನೀತ್ ರಾಜ್ ಕುಮಾರ್ ನಟನೆಯ ಪರಮಾತ್ಮ, ಯಶ್ ಅಭಿನಯದ ಜಾನು ಇದಾದ ನಂತರ ಅವರು ಕಾಲಿವುಡ್ಗೂ ಎಂಟ್ರಿಕೊಟ್ಟರು.
ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟು, ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದರೂ ಸಹ ದೀಪಾ ಸನ್ನಿಧಿ ಸ್ಯಾಂಡಲ್ವುಡ್ ಮಾತ್ರವಲ್ಲದೇ ಸಿನಿಮಾರಂಗವನ್ನೇ ತೊರೆದರು. 2018ರಲ್ಲಿ ವಿಲ್ಬಿ ಬ್ಯಾಕ್ ಸೂನ್ ಎಂದು ಕೊನೆಯದಾಗಿ ಪೋಸ್ಟ್ ಹಂಚಿಕೊಂಡರು. ಈ ಪೋಸ್ಟ್ಗೆ ದೀಪಾವಳಿ ಹಬ್ಬದವರೆಗೂ ಹಲವರು ಕಾಮೆಂಟ್ ಮಾಡುತ್ತಲೇ ಇದ್ದರು.
ನನಗೆ ಈ ಸೆಲ್ಫಿ ಫೋಟೋ ತೆಗೆದುಕೊಳ್ಳೋದು ಅಷ್ಟಾಗಿ ಇಷ್ಟವಾಗೋದಿಲ್ಲ. ಇದೊಂದು ಮುಜುಗರದ ಸಂಗತಿ. ಆದರೆ ನಿಮ್ಮ ಪ್ರೀತಿಗೆ ಇಂದು ನಾನು ಮನಸೋತಿದ್ದೇನೆ, ಹೀಗಾಗಿ ಈ ಫೋಟೋ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿಗೆ ನಾನು ಆಭಾರಿ ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದರು.
ದೀಪಾ ಸನ್ನಿಧಿ ಅವರ ಮೊದಲ ಪೋಸ್ಟ್ ಕಂಡ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಹಂಚಿಕೊಂಡಿದ್ದಾರೆ. ಸರಸ್ವತಿ ಹಬ್ಬಕ್ಕೆ ಸರಸ್ವತಿ ಬರ್ಲಿಲ್ಲ, ಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿ ಬಂದಿಲ್ಲ. ಆದರೆ, ದೀಪಾವಳಿಗೆ ದೀಪ ಬಂದ್ರು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪರಮಾತ್ಮನಿಗೆ ಆತ್ಮ ನೀನು ಹೆಂಗೆ ಮರೆಯಲಿ ಎಂದಿದ್ದಾರೆ. ಇನ್ನೂ ಕೆಲವರು ನಿಮಗೆ ಮತ್ತೆ ಸಿನಿಮಾ ರಂಗಕ್ಕೆ ಬರಲು ಏಳೆಂಟು ವರ್ಷ ಬೇಕಾಯ್ತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).