3 Idiots screening San Francisco
- ಒತ್ತಡದಲ್ಲಿರುವವರಿಗೆ, ಸ್ಪೂರ್ತಿ ಬೇಕು ಎನ್ನುವವರಿಗಾಗಿ 3 Idiots ಸಿನಿಮಾ ಪ್ರದರ್ಶನ
- ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 250 ಸೀಟ್ವುಳ್ಳ ಥಿಯೇಟರ್ ಬಾಡಿಗೆ ಪಡೆದ ಪಾಕ್ ಮೂಲದ ಟೆಕ್ಕಿ
- 30 ಸಲ 3 Idiots ನೋಡಿದ್ರು ಬೇಜಾರೇ ಆಗೋದಿಲ್ಲ, ಪ್ರತಿ ಬಾರಿ ನಗು -ಅಳು ಕಾಣಿಸಿಕೊಲ್ಳುತ್ತೆ ಎಂದ ಫರ್ಜಾ ಮಜೀದ್
3 Idiots screening San Francisco: 2009ರಲ್ಲಿ ರಿಲೀಸ್ ಆಗಿದ್ದ 3 ಈಟಿಯಟ್ಸ್ ಸಿನಿಮಾ ಸಾರ್ವಕಾಲಿಕ ಯಶಸ್ವಿ ಸಿನಿಮಾ. ಚಿತ್ರದಲ್ಲಿರುವ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ಮೇಲಿನ ಒತ್ತಡ, ಕನಸುಗಳನ್ನು ಬೆನ್ನಟ್ಟುವ ಪರಿ, ಎಷ್ಟೇ ಸಮಸ್ಯೆ ಬಂದರು ಅದನ್ನು ಬಗೆಹರಿಸಕೊಳ್ಳುವ ರೀತಿಯನ್ನು ರಾಜ್ ಕುಮಾರ್ ಹಿರಾನಿಯವರು ಚಂದವಾಗಿ ಕಟ್ಟಿಕೊಟ್ಟಿದ್ದರು. ಇಷ್ಟೇ ಅಲ್ಲ ಅಮೀರ್ ಖಾನ್, ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್ ಅವರು ಸಹ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದ ಕಾರಣದಿಂದಲೇ ಇದು ಇಂದಿಗೂ ಎಲ್ಲರೂ ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾವಾಗಿ ಉಳಿದುಕೊಂಡಿದೆ.
ಇಂತಹ ಸ್ಪೂರ್ತಿದಾಯಕ ಸಿನಿಮಾವನ್ನು ನೊಂದು-ಬೆಂದು, ಒತ್ತಡದಲ್ಲಿ ಬದುಕುತ್ತಿರುವ ವಿದ್ಯಾರ್ಥಿಗಳು ಅದರಿಂದ ಹೊರಬರುವಂತೆ ಮಾಡಲು, ಪಾಕಿಸ್ತಾನಿ ಮೂಲದ ಉದ್ಯಮಿ ಮತ್ತು ತಂತ್ರಜ್ಞಾನ ಸಂಸ್ಥಾಪಕ ಫರ್ಜಾ ಮಜೀದ್ ಮಹತ್ವದ ಹೆಜ್ಜೆಯೊಂದನ್ನಿಟ್ಟಿದ್ದಾರೆ. ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 250 ಆಸನವುಳ್ಳ ಥಿಯೇಟರ್ನ್ನು ಬಾಡಿಗೆ ಪಡೆದುಕೊಂಡು 3 ಈಡಿಯಟ್ಸ್ ಅನ್ನು ಪ್ರದರ್ಶಿಸಿದ್ದಾರೆ. ಇವರ ಈ ಸಾಧನೆಯೀ ಎಕ್ಸ್ನಲ್ಲಿ ವೈರಲ್ ಆಗುತ್ತಿದೆ.
ಫರ್ಜಾ ಮಜೀದ್ ಹೇಳಿದ್ದೇನು?
'ನಾನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 250 ಆಸನವುಳ್ಳ ಥಿಯೇಟರ್ ಬಾಡಿಗೆ ಪಡೆದುಕೊಂಡಿದ್ದೇನೆ ಏಕೆಂದರೆ, ವಿಶ್ವದಲ್ಲೇ ಸಾಕಷ್ಟು ಸಕ್ಸಸ್ ಕಂಡಿರುವ ಸಿನಿಮಾವಾದ '3 ಈಡಿಯಟ್ಸ್' ಅನ್ನು ಪ್ರದರ್ಶಿಸಲು ಎಂದು ಬರೆದುಕೊಂಡಿದ್ದಾರೆ. ಭಾರತದ ಹಿನ್ನೆಲೆಯ ಸಿನಿಮಾವಾಗಿದೆ. ಮೂವರು ಸ್ನೇಹಿತರು ತಮ್ಮ ಜೀವನದಲ್ಲಿ ಏನು ಮಾಡಬೇಕು ಎಂದು ತಿಳಿಯದೇ ತಮ್ಮನ್ನು ತಾವು ಹುಡುಕಿಕೊಳ್ಳುವ ಸುಂದರ ಕತೆಯಾಗಿದೆ. ನಿಮ್ಮ ಜೀವನದಲ್ಲಿ ನೀವು ಜಿಗುಪ್ಸೆ ಕಂಡಿದ್ದರೆ, ಯಾರಿಂದಲೋ ಸ್ಪೂರ್ತಿ ಕಂಡುಕೊಳ್ಳಲು ಬಯಸುತ್ತಿದ್ದರೆ, ಮನಸಾರೆ ನಗಬೇಕೆನ್ನುವ ಹಂಬಲವಿದ್ದರೆ ದಯವಿಟ್ಟು ಈ ಸಿನಿಮಾ ನೋಡಿ' ಎಂದು 'X' ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಫರ್ಜಾ ಮಜೀದ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಹೀಗಿದೆ..
'ಮರೀನಾ ಥೀಯೇಟರ್ನಲ್ಲಿ ಮೇ.24ರಂದು ಸಿನಿಮಾ ಪ್ರದರ್ಶನವಿದೆ. ಮಧ್ಯಾಹ್ನ 12:30ರಿಂದ ಸಂಜೆ 4ರವರೆಗೂ ಪ್ರದರ್ಶನವಿರಲಿದ್ದು, ಒಬ್ಬರಿಗೆ ಒಂದು ಟಿಕೆಟ್‌ನಂತೆ ಕೇವಲ ಹತ್ತು ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ. ಅಂದರೆ, ಭಾರತದ ರೂಪಾಯಿಗಳಲ್ಲಿ 964ರೂಪಾಯಿಯಾಗಿರಲಿದೆ.' ಎಂದು ಹೇಳಿಕೊಂಡಿದ್ದಾರೆ
'ಇದು ಬಾಲಿವುಡ್ನ ಅತ್ಯುತ್ತಮ ಸಿನಿಮಾ. ನನಗೆ ಜೀವನದಲ್ಲಿ ಸ್ಪೂರ್ತಿ, ನಗು ಬೇಕಾದಾಗ, ಹತಾಶೆಯಿಂದ ಇದ್ದಾಗ ಈ ಸಿನಿಮಾ ನೋಡುತ್ತೇನೆ. 30 ಬಾರಿ ನೋಡಿದರು ಬೇಸರವಾಗೋದೆ ಇಲ್ಲ. ಪ್ರತಿ ಬಾರಿ ಈ ಸಿನಿಮಾ ನೋಡಿದಾಗ ನಾನು ನಗುತ್ತೇನೆ, ಅಳುತ್ತೇನೆ, ಭಾವನೆ ತುಂಬಿ ಬರುತ್ತದೆ' ಎಂದು ಫರ್ಜಾ ಹೇಳಿಕೊಂಡಿದ್ದಾರೆ.
ವಿದೇಶಿ ಪ್ರಜೆಗಳ ಪ್ರತಿಕ್ರಿಯೆ ಹೀಗಿತ್ತು...
ಫರ್ಜಾ ಮಜೀದ್ ಅವರ ಈ ಪೋಸ್ಟ್ಗೆ ವಿದೇಶಿ ಪ್ರಜೆಗಳು ಪೋಸ್ಟ್ ಹಂಚಿಕೊಂಡಿದ್ದಾರೆ. ಸಿನಿಮಾ ತುಂಬಾನೆ ಇಷ್ಟವಾಯಿತು ಎಂದಿದ್ದಾರೆ. 3 ಈಡಿಯಟ್ಸ್ ನೆಚ್ಚಿನ ಸಿನಿಮಾದಲ್ಲಿ ಒಂದಾಗಿದೆ ಎಂದಿದ್ದಾರೆ. ಭಾವನಾತ್ಮಕ ಮತ್ತು ಕತೆ ಹೇಳುವಿಕೆ ಚೆನ್ನಾಗಿದೆ ಎಂದು ಶ್ಲಾಘಿಸಿದ್ದಾರೆ, (ಏಜೆನ್ಸೀಸ್).