ವಿದೇಶಿ ನೆಲದಲ್ಲಿ ಸ್ವದೇಶಿ ಹವಾ: ಆಸ್ಕರ್ ರೆಡ್ ಕಾರ್ಪೆಟ್ನಲ್ಲಿ ಹಾಲಿವುಡ್ ಸ್ಟಾರ್ಗಳಿಗೆ ತೆಲಂಗಾಣ ಜ್ಯುವೆಲರಿ ಟಚ್! Oscars red carpet
ಲಾಸ್ ಏಂಜಲೀಸ್: 98ನೇ ಆಸ್ಕರ್ 2026 ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಈ ವರ್ಷ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದ್ದು, ಹಾಲಿವುಡ್‌ನ ಸ್ಟಾರ್ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅವಾರ್ಡ್ಗೆ ನಾಮಿನಿ ಆಗಿರುವ ತಾರೆಯರು ಡಾಲ್ಬಿ ಥಿಯೇಟರ್‌ನ ರೆಡ್ ಕಾರ್ಪೆಟ್ನಲ್ಲಿ ( Oscars red carpet ) ಕಂಗೊಳಿಸಿದರು.
ಈ ಅದ್ಧೂರಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಹಾಲಿವುಡ್‌ನ ಬ್ರಾಂಡಿ ಕಾರ್ಲೈಲ್ ಮತ್ತು ಕ್ಯಾತ್ರಿನ್ ಶೆಫರ್ಡ್ ಭಾರತದಲ್ಲಿ ಡಿಸೈನ್ ಮಾಡಲಾದ ಆಭರಣಗಳನ್ನು ಧರಿಸಿ ಬಂದಿದ್ದು ಹಲವರನ್ನು ಬೆರಗುಗೊಳಿಸಿತು. ಚಿನ್ನವನ್ನು ಬಳಸಿ ತಯಾರಿಸಲ್ಪಟ್ಟ ಹ್ಯಾಂಡ್ಮೇಡ್ ಮತ್ತು ಪಚ್ಚೆಯ ಸುತ್ತ ರೂಪಿಸಲಾದ ಪೇವ್-ಸೆಟ್ ವಜ್ರಗಳ ಆಭರಣಗಳು ಇಂಗ್ಲಿಷ್ ಕಲಾವಿದರ ಲುಕ್ ಅನ್ನು ಇನಷ್ಟು ಅದ್ಭುತಗೊಳಿಸಿದ್ದು ವಿಶೇಷ. ಈ ಹ್ಯಾಂಡ್ಮೇಡ್ ಜ್ಯುವೆಲರಿ ಹಿಂದೆ ತೆಲಂಗಾಣದ ಕುಶಲಕರ್ಮಿಗಳ 100ಕ್ಕೂ ಹೆಚ್ಚು ಗಂಟೆಗಳ ಕರಕುಶಲತೆಯ ಶ್ರಮವಿದೆ.
ಇನ್ನು ಕ್ಯಾಥರೀನ್ ಶೆಫರ್ಡ್ ಕೊರಳಿನಲ್ಲಿ ಕಾಣಿಸಿಕೊಂಡ ಉದ್ದದ ವಜ್ರದ ನೆಕ್ಲೆಸ್, ಆಯ್ದ ಡೈಮೆಂಡ್ಗಳಿಂದ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ವಿದೇಶಿ ನೆಲದಲ್ಲಿ ಹಾಲಿವುಡ್ ಸ್ಟಾರ್ಗಳು ನಮ್ಮ ದೇಶಿಯ ಜ್ಯುವೆಲರಿ ಧರಿಸಿ ಬಂದಿದ್ದು ಸ್ಥಳದಲ್ಲಿದ್ದ ಫೋಟೋಗ್ರಾಫರ್ಗಳು ಹಾಗೂ ಇತರೆ ತಾರೆಯರ ಕಣ್ಣು ಕುಕ್ಕುವಂತಿತ್ತು.
98ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ನಟಿ ಪ್ರಿಯಾಂಕ ಚೋಪ್ರಾ ಆಸ್ಕರ್ ಪ್ರಶಸ್ತಿ ವಿಜೇತ ಜೇವಿಯರ್ ಬಾರ್ಡೆಮ್ ಜೊತೆ ಸೇರಿ ಅಂತರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಮಾಡಿದರು.