ಸಿನಿವಾಣಿ

ಆಸ್ಕರ್​ ಪ್ರಶಸ್ತಿ 2025: ಆಡ್ರಿಯನ್ ಬ್ರಾಡಿ ಅತ್ಯುತ್ತಮ ನಟ, ಮೈಕಿ ಮ್ಯಾಡಿಸನ್​ಗೆ ಅತ್ಯುತ್ತಮ ನಟಿ ಗೌರವ, ಇಲ್ಲಿದೆ ವಿಜೇತರ ಪಟ್ಟಿ... Oscar Awards

Oscar Awards : ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್​ ಪ್ರಶಸ್ತಿ ಗೆಲ್ಲಬೇಕೆಂಬುದು ಸಿನಿ ಜಗತ್ತಿನ ಅನೇಕ ಕಲಾವಿದರ ಬಹುದೊಡ್ಡ ಆಸೆ. ಒಂದು ವೇಳೆ ಈ ಪ್ರಶಸ್ತಿಯನ್ನು ಗೆದ್ದರೆ, ಕಲಾವಿದರು ಇಡೀ ಜಗತ್ತನ್ನೇ ಗೆದ್ದ ಖುಷಿಯಲ್ಲಿರುತ್ತಾರೆ. ಇದೀಗ 2025ನೇ ಸಾಲಿನ ಆಸ್ಕರ್​ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ.

97ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್​ ಏಂಜಲೀಸ್​ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಲೇಟ್ ನೈಟ್ ಶೋ ನಿರೂಪಕಿ ಕಾನನ್ ಒ ಬ್ರೇನ್ ಆಯೋಜಿಸಿದ್ದಾರೆ. ಸೆಲೆಬ್ರಿಟಿಗಳು ಮತ್ತು ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಕರ್ ಆಯೋಜಕರು ವಿಜೇತರ ಹೆಸರನ್ನು ಘೋಷಿಸಲಾಯಿತು.

ದಿ ಬ್ರೂಟಲಿಸ್ಟ್ ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ ಆಡ್ರಿಯನ್ ಬ್ರಾಡಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದರು. ಬ್ರಾಡಿ ಅವರಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿ. ಇದಕ್ಕೂ ಮೊದಲು ಅವರು ದಿ ಪಿಯಾನಿಸ್ಟ್ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಗೆದ್ದಿದ್ದರು.

ಅತ್ಯುತ್ತಮ ನಟಿ ವಿಭಾಗದಲ್ಲಿ ಮೈಕಿ ಮ್ಯಾಡಿಸನ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದರು. ಮ್ಯಾಡಿಸನ್​ ಅವರು ಡೆಮಿ ಮೂರ್, ಫೆರ್ನಾಂಡಾ ಟೊರೆಸ್ ಮತ್ತು ಸಿಂಥಿಯಾ ಎರಿವೊ ಅವರಂತಹ ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ಪಡೆದರು. ಅನೋರಾ ಸಿನಿಮಾದಲ್ಲಿ ತಮ್ಮ ಅದ್ಭುತ ಅಭಿಯನಕ್ಕಾಗಿ ಮ್ಯಾಡಿಸನ್ ಈ ಗೌರವಕ್ಕೆ ಭಾಜನರಾಗಿದ್ದಾರೆ.

ನಿರ್ದೇಶಕ, ಬರಹಗಾರ ಮತ್ತು ಸಂಪಾದಕ ಸೀನ್ ಬೇಕರ್ ಅವರು ಅನೋರಾ ಚಿತ್ರದ ಕೆಲಸಕ್ಕಾಗಿ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.

ಆಸ್ಕರ್​ ವಿಜೇತರ ಪಟ್ಟಿ ಈ ಕೆಳಕಂಡಂತಿದೆ

* ಅತ್ಯುತ್ತಮ ಪೋಷಕ ನಟ - ಕೀರನ್ ಕಲ್ಕಿನ್ (ಎ ರಿಯಲ್ ಪೇನ್)

* ಅತ್ಯುತ್ತಮ ಅಡಾಪ್ಟೆಡ್​ ಸ್ಕ್ರೀನ್​ಪ್ಲೇ - ಪೀಟರ್ ಸ್ಟ್ರಾಘನ್ (ಕಾನ್ಕ್ಲೇವ್)

* ಅತ್ಯುತ್ತಮ ಮೂಲ ಚಿತ್ರಕಥೆ - ಸೀನ್ ಬೇಕರ್ (ಅನೋರಾ)

* ಅತ್ಯುತ್ತಮ ವೇಷಭೂಷಣ ವಿನ್ಯಾಸ - ಪಾಲ್ ಟೇಜ್‌ವೆಲ್ (ವಿಕೆಡ್)

* ಅತ್ಯುತ್ತಮ ಅನಿಮೇಟೆಡ್ ಫೀಚರ್​ - ಫ್ಲೋ

* ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್

* ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ - ದಿ ಸಬ್‌ಸ್ಟೆನ್ಸ್

* ಅತ್ಯುತ್ತಮ ಸಂಕಲನ - ಸೀನ್ ಬೇಕರ್ (ಅನೋರಾ)

* ಅತ್ಯುತ್ತಮ ಪೋಷಕ ನಟಿ - ಜೋ ಸಲ್ಡಾನಾ (ಎಮಿಲಿಯಾ ಪೆರೆಜ್)

* ಅತ್ಯುತ್ತಮ ಮೂಲ ಹಾಡು - ಎಲ್ ಮಾಲ್ (ಎಮಿಲಿಯಾ ಪೆರೆಜ್)

* ಅತ್ಯುತ್ತಮ ಪ್ರೊಡಕ್ಷನ್​ ಡಿಸೈನ್​ - ನಾಥನ್ ಕ್ರೌಲಿ, ಲೀ ಸ್ಯಾಂಡಲ್ಸ್ (ವಿಕೆಡ್)

* ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್​ - ನೋ ಅದರ್ ಲ್ಯಾಂಡ್

* ಅತ್ಯುತ್ತಮ ಸಾಕ್ಷ್ಯಚಿತ್ರ - ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ

* ಅತ್ಯುತ್ತಮ ಧ್ವನಿ - ಡ್ಯೂನ್ - ಭಾಗ 2

* ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ - ಐ ಆಮ್ ನಾಟ್ ಎ ರೋಬೋಟ್

* ಅತ್ಯುತ್ತಮ ಛಾಯಾಗ್ರಹಣ - ಲಾಲ್ ಕ್ರೇಲ್ (ದಿ ಬ್ರೂಟಲಿಸ್ಟ್)

* ಅತ್ಯುತ್ತಮ ನಿರ್ದೇಶಕ - ಸೀನ್ ಬೇಕರ್ (ಅನೋರಾ)

* ಅತ್ಯುತ್ತಮ ನಟ - ಆಡ್ರಿಯನ್ ನಿಕೋಲಸ್ ಬ್ರಾಡಿ (ದಿ ಬ್ರೂಟಲಿಸ್ಟ್)

* ಅತ್ಯುತ್ತಮ ಮೂಲ ಸಂಗೀತ - ಡೇನಿಯಲ್ ಬ್ಲಂಬರ್ಗ್ (ದಿ ಬ್ರೂಟಲಿಸ್ಟ್)

* ಅತ್ಯುತ್ತಮ ನಟಿ - ಮೈಕಿ ಮ್ಯಾಡಿಸನ್ (ಅನೋರಾ)