ಸಿನಿವಾಣಿ

ಆನಂದಿ ಗೋಪಾಲ್​ಗೆ ಇಂದು ಮುಕ್ತ ಪ್ರವೇಶ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಮಾ. 1ರಂದು ದೇಶದ ಮೊದಲ ವೈದ್ಯೆ ಡಾ.ಆನಂದಿಬಾಯಿ ಅವರ ಕುರಿತ ಮರಾಠಿ ಸಿನಿಮಾ ‘ಆನಂದಿ ಗೋಪಾಲ್’ ಪ್ರದರ್ಶನವಾಗಲಿದೆ.

ವಿಶೇಷವೆಂದರೆ ಇದಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಇರುವುದರಿಂದ ಪಾಸ್ ಇಲ್ಲದವರೂ ಈ ಸಿನಿಮಾ ವೀಕ್ಷಿಸಬಹುದಾಗಿದೆ. ‘ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ’ ಈ ಸಿನಿಮಾ ವೀಕ್ಷಣೆ ಬಳಿಕ ‘ಚಲನಚಿತ್ರ ಮತ್ತು ಸ್ತ್ರೀಸಂವೇದನೆ’ ಎಂಬ ವಿಷಯ ಕುರಿತು ಸಂವಾದವನ್ನೂ ಏರ್ಪಡಿಸಿದೆ.

ಸಂವಾದ ಕಾರ್ಯಕ್ರಮದಲ್ಲಿ ಲೇಖಕಿ ಪ್ರತಿಭಾ ನಂದಕುಮಾರ್ ಅವರ ಪ್ರಾಸ್ತಾವಿಕ ಮಾತುಗಳಿರಲಿವೆ. ಡಾ.ಆನಂದಿಬಾಯಿ ಅವರ ಕುರಿತ ಮನೋಜ್ಞ ಕಥನ ಇರುವ ಈ ಸಿನಿಮಾ ದೇಶ-ವಿದೇಶಗಳಲ್ಲಿ ಪ್ರದರ್ಶನ ಕಂಡು ವ್ಯಾಪಕ ಮೆಚ್ಚುಗೆ ಗಳಿಸಿದೆ. ಚಾಮರಾಜಪೇಟೆ ಮಕ್ಕಳ ಕೂಟ ಬಳಿ ಇರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಡಾ.ರಾಜ್ ಭವನದಲ್ಲಿ ಮಾ.1ರ ಬೆಳಗ್ಗೆ 10.30ಕ್ಕೆ ‘ಆನಂದಿ ಗೋಪಾಲ್’ ಪ್ರದರ್ಶನ ನಡೆಯಲಿದೆ.