​Dhanush OM Teaser release 
ಸಿನಿವಾಣಿ

ಧನುಷ್-ಮಮ್ಮೂಟಿ-ಸಾಯಿಪಲ್ಲವಿ ಒಂದೇ ಚಿತ್ರದಲ್ಲಿ!; ಅಬ್ಬರಿಸಲು ಸಜ್ಜಾಗಿದೆ ಬಿಗ್ ಬಜೆಟ್ ಸಿನಿಮಾ ಹೆಸರು, ರಿಲೀಸ್​ ಯಾವಾಗ?

ಪ್ರಮುಖ ಮುಖ್ಯಾಂಶಗಳು

  • ​ಧನುಷ್ ನಟನೆಯ ಬಹುನಿರೀಕ್ಷಿತ 'ಓಂ' ಚಿತ್ರದ ಮೊದಲ ಟೀಸರ್​​ ಬಿಡುಗಡೆ.
  • ಈ ಚಿತ್ರದಲ್ಲಿ ಮಮ್ಮುಟ್ಟಿ, ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಟನೆ.
  • ಅಕ್ಟೋಬರ್ 16ರಂದು 'ಓಂ' ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
Dhanush’s OM Teaser:
ಮಾರಿ 2 ಸಿನಿಮಾದ ಹಿಟ್​​ ಜೋಡಿ ಸಾಯಿಪಲ್ಲವಿ ಹಾಗೂ ಧನುಷ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿದೆ. ಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದು, ಚಿತ್ರದ ಟೀಸರ್​ ರಿಲೀಸ್ ಮಾಡಲಾಗಿದೆ. ದಟ್ಟವಾದ ಕಾಡುಗಳು, ಸಶಸ್ತ್ರ ಸಂಘರ್ಷ ಹಾಗೂ ಬಂಡಾಯದ ಹಿನ್ನೆಲೆಯನ್ನು ಒಳಗೊಂಡ ಈ ಭರ್ಜರಿ ಆ್ಯಕ್ಷನ್ ಡ್ರಾಮಾ ಚಿತ್ರದ ಪ್ರೋಮೋ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?

ಅಮರನ್ ಎನ್ನುವ ಸೂಪರ್ ಹಿಟ್ ಸಿನಿಮಾ ಕಾಲಿವುಡ್ ಗೆ ಕೊಟ್ಟಿದ್ದ ರಾಜ್ ಕುಮಾರ್ ಪೆರಿಯಾಸಾಮಿ ಅವರು ಈ ಚಿದ್ರದ ನಿರ್ದೇಶಕರಾಗಿದ್ದಾರೆ. ನಾಯಕ ನಟನಾಗಿ ಧನುಷ್ ಬಣ್ಣ ಹಚ್ಚಿದರೆ. ಖಡಕ್ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ಮಿಂಚಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ನಟ ಭಯಂಕರರಾದ ಮಮ್ಮೂಟಿ ಇರಲಿದ್ದಾರೆ. ಶ್ರೀಲೀಲಾ ಸಹ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ. ಸಾಯಿ ಅಭ್ಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಇದೆ.
2018ರ ಪೆರಾನ್ಪು ಸಿನಿಮಾದಲ್ಲಿ ಧನುಷ್​ ಹಾಗೂ ಮಮ್ಮೂಟಿ ಒಟ್ಟಾಗಿ ನಟಿಸಿದ್ದರು. ಮಾರಿ2 ನಲ್ಲಿ ಧನುಷ್​ ಮತ್ತು ಸಾಯಿಪಲ್ಲವಿ ಒಟ್ಟಾಗಿದ್ದರು. ಅಮರನ್​ ಮೂಲಕ ರಾಜ್‌ಕುಮಾರ್ ಪೆರಿಯಸಾಮಿ ಹಾಗೂ ಸಾಯಿ ಪಲ್ಲವಿ ಒಟ್ಟಾಗಿ ಕೆಲಸ ಮಾಡಿದ್ದರು.

ಸಿನಿಮಾ ರಿಲೀಸ್​​ ಯಾವಾಗ?

ಧನುಷ್​ ವೃತ್ತಿ ಜೀವನದ 55ನೇ ಸಿನಿಮಾ ಓಂ ಅಕ್ಟೋಬರ್ 16, 2026 ರಂದು ವಿಶ್ವದಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. 'ಓಂ ಅಧ್ಯಾಯ 1' ಎಂದು ಹ್ಯಾಶ್​ಟ್ಯಾಗ್​ ಬಳಕೆ ಮಾಡಲಾಗುತ್ತಿದ್ದು, ಇದರ ಮುಂದುವರೆದ ಭಾಗ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಟೀಸರ್​ನಲ್ಲಿ ಏನಿದೆ?

ಸುಂದರವಾದ ಪರ್ವತಗಳು, ದಟ್ಟ ಅರಣ್ಯಗಳು ಮತ್ತು ಒಂದು ಭವ್ಯವಾದ ದೇವಸ್ಥಾನದ ಪಟ್ಟಣದ ದೃಶ್ಯಗಳನ್ನು ತೋರಿಸಲಾಗುತ್ತದೆ. ನಂತರ ಕಥೆಯು ಮಳೆ ಸುರಿಯುತ್ತಿರುವ ಕಾಡಿನ ಮಧ್ಯೆ ನಡೆಯುವ ಉದ್ವಿಗ್ನ ವಾತಾವರಣಕ್ಕೆ ಹೊರಳುತ್ತದೆ. ಅಲ್ಲಿ ಹೆದರಿ ನಿಂತಿರುವ ಹಳ್ಳಿಗರನ್ನು ಸಶಸ್ತ್ರ ಭದ್ರತಾ ಸಿಬ್ಬಂದಿ ಸುತ್ತುವರೆದಿರುತ್ತಾರೆ. ಮರದ ದಿಮ್ಮಿಗೆ ಸಿಕ್ಕಿಕೊಂಡಿರುವ ರಕ್ತಸಿಕ್ತ ಕೊಡಲಿ ಅಲ್ಲಿ ನಡೆಯುತ್ತಿರುವ ಹಿಂಸಾಚಾರದ ಮುನ್ಸೂಚನೆಯನ್ನು ನೀಡುತ್ತದೆ.
​ಸಶಸ್ತ್ರ ಸಿಬ್ಬಂದಿ ಹಳ್ಳಿಗರತ್ತ ಗನ್ ಗುರಿ ಇಟ್ಟಾಗ, ಹೆದರದೆ ಹಳ್ಳಿಗರೆಲ್ಲರೂ ಒಟ್ಟಾಗಿ “ಅಣ್ಣಾ ಮಲೈಯಾರ್ಕು!” ಎಂದು ಘೋಷಣೆ ಕೂಗಲು ಪ್ರಾರಂಭಿಸುತ್ತಾರೆ. ಆ ಭಯದ ವಾತಾವರಣವು ತಕ್ಷಣವೇ ಪ್ರತಿಭಟನೆಯಾಗಿ ಬದಲಾಗುತ್ತದೆ.
​ಈ ಸಂದರ್ಭದಲ್ಲಿ ಮಳೆ ಮತ್ತು ಮಂಜಿನ ಮಧ್ಯೆ ನಟ ಧನುಷ್ ಭರ್ಜರಿಯಾಗಿ ಎಂಟ್ರಿ ಕೊಡುತ್ತಾರೆ. ಧನುಷ್ ಅವರು ಭದ್ರತಾ ಅಧಿಕಾರಿಗಳೊಂದಿಗೆ ನಡೆಸುವ ಕೈಕೈ ಮಿಲಾಯಿಸುವ ರೋಮಾಂಚಕ ಆ್ಯಕ್ಷನ್ ಸನ್ನಿವೇಶಗಳು ಟೀಸರ್‌ನ ಹೈಲೈಟ್ ಆಗಿದೆ.
​ಟೀಸರ್‌ನ ಕೊನೆಯಲ್ಲಿ ಧನುಷ್ ಬೃಹತ್ ಆಯುಧವೊಂದನ್ನು ತಲೆಯ ಮೇಲೆ ಎತ್ತುವ ದೃಶ್ಯದೊಂದಿಗೆ ಚಿತ್ರದ ಟೈಟಲ್ ಲೋಗೋ ಅನಾವರಣಗೊಳ್ಳುತ್ತದೆ. ಈ ಕಥೆಯು ಅಧ್ಯಾಯ 1: ಉಧಿರಂ - ದಿ ಬ್ಲಡ್ ವುಡ್ ನಿಂದ ಆರಂಭವಾಗಲಿದ್ದು, ಇದು ಬಹುಭಾಗಗಳ ಸರಣಿ ಚಿತ್ರವಾಗಿರಲಿದೆ, (ಏಜೆನ್ಸೀಸ್).