ಸಿನಿವಾಣಿ

ದೇವರ ಸಿನಿಮಾದಿಂದ ಜಾಹ್ನವಿಗೆ ಅನ್ಯಾಯ! ಈ ರೀತಿ ಮಾಡಬಾರದಿತ್ತು ಎಂದು ಅಭಿಮಾನಿಗಳ ಆಕ್ರೋಶ | Janhvi Kapoor

ಹೈದರಾಬಾದ್​: ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ "ದೇವರ" ಸೆ.27ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿದೆ. ಈ ಸಿನಿಮಾವನ್ನು ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ಕೊಸರಾಜು ಹರಿಕೃಷ್ಣ ಮತ್ತು ಸುಧಾಕರ್ ಮಿಕ್ಕಿಲಿನಿ ನಿರ್ಮಿಸಿದ್ದಾರೆ. ಜೂ. ಎನ್​ಟಿಆರ್ ಮತ್ತು ಜಾಹ್ನವಿ ಕಪೂರ್ ( Janhvi Kapoor ) ಅಭಿನಯದ ದೇವರ ಚಿತ್ರದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಮೊದಲ ದಿನವೇ ದೇವರ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರವು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡರೂ ಮೊದಲ ದಿನವೇ 172 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ಎನ್‌ಟಿಆರ್‌ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ, ಹಲವು ನಿರೀಕ್ಷೆಗಳೊಂದಿಗೆ ನಾಯಕಿಯಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್ ಪಾತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಕೆಯ ನಟನೆ ಬಗ್ಗೆಯೂ ಅದೇ ಮಾತುಗಳು ಕೇಳಿಬರುತ್ತಿವೆ.

ವಾಸ್ತವವಾಗಿ ದೇವರ ಭಾಗ 1ರಲ್ಲಿ ಜಾಹ್ನವಿ ಕಪೂರ್ ಕೇವಲ​ ಒಂದೇ ಒಂದು ಹಾಡಿನಲ್ಲಿ ಇದ್ದಾರೆ. ಅಲ್ಲದೆ, ಹಾಡನ್ನು ಬಿಟ್ಟು ಇಡೀ ಸಿನಿಮಾದಲ್ಲಿ ಕೇವಲ 10 ನಿಮಿಷದಲ್ಲಿ ಮಾತ್ರ ಜಾಹ್ನವಿ ಬಂದು ಹೋಗುತ್ತಾರೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಜಾಹ್ನವಿ ಅತಿಥಿ ಪಾತ್ರ ಮಾಡಿದ್ದಾರೆ ಎಂದು ಅಭಿಮಾನಿಗಳು ಬೇಸರದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಹ್ನವಿ ಅವರ ಅಭಿಮಾನಿಗಳು ಅವರ ಹೊಸ ತೆಲುಗು ಸಿನಿಮಾದತ್ತ ಇದೀಗ ಗಮನ ಹರಿಸಿದ್ದಾರೆ.

ಗ್ಲೋಬಲ್ ಸ್ಟಾರ್ ರಾಮ್​ಚರಣ್ ಅವರು ನಿರ್ದೇಶಕ ಬುಚ್ಚಿಬಾಬು ಸಾನಾ ಜೊತೆ ಸಿನಿಮಾ ಮಾಡಲಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿರುವ ಈ ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಜಾಹ್ನವಿಗೆ ದೇವರ ಚಿತ್ರದಲ್ಲಿ ಹೆಚ್ಚು ಸ್ಕ್ರೀನ್ ಟೈಮ್ ಇಲ್ಲ. ಇರುವ ದೃಶ್ಯಗಳಲ್ಲೂ ಆಕೆಯ ಅಭಿನಯಕ್ಕೆ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಜಾಹ್ನವಿ ಗ್ಲಾಮರ್ ಹೊರತಾಗಿ, ನಟನೆಗೆ ಹೆಚ್ಚು ಸ್ಕೋಪ್ ಸಿಗದ ಕಾರಣ ರಾಮ್​ಚರಣ್ ಜತೆಗೆ ನಟಿಸುವ ಚಿತ್ರದ ಮೇಲೆ ಇದೀಗ ಭರವಸೆ ಮೂಡಿದೆ. ಈ ಚಿತ್ರದಲ್ಲೂ ಜಾಹ್ನವಿ ಪಾತ್ರಕ್ಕೆ ಎಷ್ಟು ಮಹತ್ವ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)