Rajinikanth Ego Crushed Incident 
ಸಿನಿವಾಣಿ

'ಯಾರೂ ನನ್ನನ್ನು ಕಣ್ಣೆತ್ತಿ ನೋಡಲಿಲ್ಲ ಅಂದೇ ನನ್ನ ಅಹಂ ಪುಡಿ ಪುಡಿಯಾಯ್ತು': ಆಧ್ಯಾತ್ಮಿಕ ವರ್ಸಸ್ ಇಗೋ ನಡುವಿನ ವ್ಯತ್ಯಾಸ ಬಿಚ್ಚಿಟ್ಟ Rajinikanth

ಪ್ರಮುಖ ಮುಖ್ಯಾಂಶಗಳು

  • ಅಹಂ ತುಂಬಿದ್ದ ಜೀವನ ಬದಲಾಗಿದ್ದು ಹೇಗೆ ಎಂದು ಮಾಹಿತಿ ಹಂಚಿಕೊಂಡ ರಜನಿಕಾಂತ್​
  • ಆಧ್ಯಾತ್ಮಿಕ ಶಕ್ತಿ ಮುಂದೆ ಯಾವುದು ನಿಲ್ಲಲ್ಲ ಎಂದು ಪ್ರಸ್ತಾಪ
  • ಅಹಂ ದೂರವಾಗಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡ ರಜನಿಕಾಂತ್
Rajinikanth Ego Crushed Incident: ಕಾಲಿವುಡ್​ನ ಸೂಪರ್​ ಸ್ಟಾರ್​ ರಜನಿಕಾಂತ್​ ಅವರ ಜೀವನ ಎಲ್ಲರಂತೆ ಸುಲಭದ್ದಾಗಿರಲಿಲ್ಲ. ಕಂಡಕ್ಟರ್​ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ಒಂದು ಜೊತೆ ಬಟ್ಟೆ, ಬ್ರಷ್ ಹಿಡಿದು ಊರೂರು ಅಲೆದು, ಆಡಿಷನ್​ ಕೊಟ್ಟು ಹಗಲಿರುಳು ಕಷ್ಟ ಪಟ್ಟ ಕಾರಣ ಇಂದಿಗೂ ಅವರನ್ನು ಜನರು ನೆನೆಯುತ್ತಾರೆ.  ಬಹಳ ಸೌಮ್ಯವಾಗಿ ಕಾಣುವ ರಜನೀಕಾಂತ್​ರಿಗೂ ಅಹಂಕಾರವಿತ್ತಂತೆ ಅದು ಅವರಿಂದ ದೂರವಾದ ಪ್ರಸಂಗವೊಂದನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. 
ಇತ್ತೀಚೆಗೆ ಆರ್ಟ್​ ಆಫ್​ ಲಿವಿಂಗ್​​ನಲ್ಲಿ ಆಯೋಜಿಸಿದ್ದ 45ನೇ ವಿಶೇಷ ಕಾರ್ಯಕ್ರಮ ಹಾಗೂ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದ ಅವರು, ಅಹಂ ಮತ್ತು ಆಧ್ಯಾತ್ಮಿಕ ಜೀವನ ತಮಗೆ ಕಲಿಸಿದ್ದ ಸ್ಮರಣೀಯ ಘಟನೆಯನ್ನು ಹಂಚಿಕೊಂಡಿದ್ದಾರೆ.

ಅಹಂ ದೂರವಾಗಿದ್ದು ಹೀಗೆ

 ಗುರೂಜಿ  ಅವರೊಂದಿಗೆ ಸಾವಿರಾರು ಭಕ್ತರು ಸೇರಿದ್ದ ದರ್ಶನ ಸ್ಥಳಕ್ಕೆ ತೆರಳಿದ್ದರು. ನಾನು ಹೋದರೆ ದೊಡ್ಡ ಜನಸಮೂಹವೇ ನನ್ನತ್ತ ಬರಬಹುದು, ಫೋಟೋ, ಆಟೋಗ್ರಾಫ್ ತೆಗೆದುಕೊಳ್ಳಬಹುದು ಎಂದು ಭಾವಿಸಿದ್ದೆ. ಅಲ್ಲಿ ತಮಿಳುನಾಡಿನ ಸಾಕಷ್ಟು ಜನ ಇರುವುದನ್ನೂ ನಾನು ಗಮನಿಸಿದ್ದೆ.ಆದರೆ ಅಲ್ಲಿ ನಡೆದದ್ದೇ ಬೇರೆ! ರಜನಿಕಾಂತ್ ನಿಜ ಹೇಳಬೇಕೆಂದರೆ, ಅಲ್ಲಿ ನೆರೆದಿದ್ದವರಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ನನ್ನ ಕಡೆ ಕಣ್ಣೆತ್ತಿ ನೋಡಲಿಲ್ಲ. ನಾನು ಮಾತ್ರ ಎಲ್ಲರಿಗೂ ಕೈ ಬೀಸುತ್ತಿದ್ದೆ, ಆದರೆ ಯಾರೂ ನನ್ನನ್ನು ಗಮನಿಸಲೇ ಇಲ್ಲ. ನಾನು ನನ್ನ ಜೀವನದಲ್ಲಿ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ಆದರೆ ಆ ಒಂದು ಘಟನೆ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿತು.ಎಂದು ಹೇಳಿ ನಕ್ಕರು.
ಆ ದಿನದಿಂದಲೇ ಆಧ್ಯಾತ್ಮಿಕರೆಯ ಶಕ್ತಿ ಎಷ್ಟಿದೆ ಅನ್ನೋದನ್ನು ನಾನು ಅರ್ಥ ಮಾಡಿಕೊಂಡೆ. ಈ ಘಟನೆ ನನ್ನ ಮನಸ್ಸನ್ನು ಕಲಕಿತು.  ಸೆಲಬ್ರೆಟಿ ಸ್ಟಾರ್ ಎನ್ನುವ ಪಟ್ಟ ಬಂದು ದೂರವಾಗುತ್ತದೆ. ಆದರೆ, ಎಲ್ಲದಕ್ಕೂ ಮಿಗಿಲಾದದ್ದು ಆಧ್ಯಾತ್ಮಿಕ ಎಂದು ಹೇಳಿದ್ದಾರೆ.

ಹಿಮಾಲಯದಲ್ಲೂ ಪ್ರಶಾಂತಿ ಸಿಗಲ್ಲ

ಆರ್ಟ್​ ಆಫ್​ ಲಿವಿಂಗ್​ನಲ್ಲಿ ಸಿಗುವ ಪ್ರಶಾಂತತೆ ಹಿಮಾಲಯದಲ್ಲೂ ಸಿಗೋದಿಲ್ಲ. ಇಲ್ಲಿರುವ ಕೆರೆಗಳು, ಹಸುಗಳು ಮತ್ತು ಪ್ರಾಣಿಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿ ಪ್ರತಿಯೊಬ್ಬರ ಮುಖದಲ್ಲೂ ಸದಾ ನಗು ಇರುತ್ತದೆ ಎಂದು ರಜನಿಕಾಂತ್​ ಮಾತನಾಡಿದರು.

ಜೈಲರ್​2ನಲ್ಲಿ ರಜನಿ ಮಿಂಚಿಂಗ್

ರಜನೀಕಾಂತ್​ ಅವರು ಜೈಲರ್​ 2 ಸಿನಿಮಾದಲ್ಲಿ ನಟಿಸುತ್ತಿದ್ದು, ನೆಲ್ಸನ್​ ದಿಲೀಪ್​ ಕುಮಾರ್​ ಅವರ ನಿರ್ದೇಶನದ್ದಾಗಿದೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣ, ಶಿವರಾಜ್​ ಕುಮಾರ್​ ಮತ್ತು ಮೋಹನ್​ ಲಾಲ್​  ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ, (ಏಜೆನ್ಸೀಸ್).